ಬಂಟ್ವಾಳ :ಸಂಕಲ್ಪ ಸಿದ್ಧಿಗಾಗಿ ಶ್ರೀ ಕ್ಷೇತ್ರ ಶಂಕರಪುರದ ಶ್ರೀಸಾಯಿ ಈಶ್ವರ್ ಗುರೂಜಿ ಯವರು ಶನಿವಾರ ಫರಂಗಿಪೇಟೆಯ ಶ್ರೀ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯಿಂದ ಶ್ರೀಗಳನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.
ಸತತ 2 ವರ್ಷಗಳಿಂದ 108 ದಿನ108 ಮಠ ಮಂದಿರ ಸಹಿತ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಸನಾತನ ಧರ್ಮ ಭೂಮಿಯ ರಕ್ಷಣೆ, ಯೋಧರು ಅವರ ಕುಟುಂಬ ರಕ್ಷಣೆ, ಹಿಂದೂಗಳ ಒಗ್ಗಟ್ಟು ಹಾಗೂ ಮಥುರಾ   ಶ್ರೀ ಕೃಷ್ಣ ಜನ್ಮ ಭೂಮಿಯಲ್ಲಿ ಶೀಘ್ರವೇ ಭವ್ಯ ಮಂದಿರದ ನಿರ್ಮಾಣದ ಸಂಕಲ್ಪ ಹೊತ್ತು ಅವರು ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಶ್ರೀ ಆಂಜನೇಯ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಚಂದ್ರಶೇಖರ ಗಾಂಭೀರ, ಪ್ರ. ಕಾರ್ಯದರ್ಶಿ ಕರುಣಾಕರ ಕೊಟ್ಟಾರಿ,ಪ್ರತಿಷ್ಠಾ ವರ್ದಂತಿ ಉತ್ಸವ ಸಮಿತಿ ಅಧ್ಯಕ್ಷ ಧನರಾಜ್ ಶೆಟ್ಟಿ ತೇವು,  ಸಂತೋಷ್ ಕುಲಾಲ್ ನೆತ್ತರಕೆರೆ ಮತ್ತಿತರರು ಉಪಸ್ಥಿತರಿದ್ದರು. 

By suddi9

Leave a Reply

Your email address will not be published. Required fields are marked *