ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಬಂಟ್ವಾಳ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ಶಾಲಾಭಿವೃದ್ಧಿ ಸಮಿತಿ ಕುಜ್ಲುಬೆಟ್ಟು ಇದರ ಸಹಯೋಗದೊಂದಿಗೆ ಶಾಲಾ ಪರಿಸರದಲ್ಲಿ ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮ ನಡೆಯಿತು.


  ಶಾಲಾ ಪರಿಸರದಲ್ಲಿ ಸುಮಾರು ಹತ್ತಕ್ಕಿಂತಲೂ ಹೆಚ್ಚು ಗಿಡ ನಾಟಿ ಮಾಡಲಾಯಿತು.ಶಾಲಾ ಮಕ್ಕಳಿಗೆ ಪರಿಸರದ ಬಗ್ಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಿದಾನಂದ ಕುಜ್ಲುಬೆಟ್ಟು ವಹಿಸಿದ್ದರು.

ಪಂಜಿಕಲ್ಲು ಪಂಚಾಯತ್ ಸದಸ್ಯರಾದ ಸಂಜೀವ ಪೂಜಾರಿ ಪಿಲಿಂಗಾಲ್, ಯೋಜನಾ ಮೇಲ್ವಿಚಾರಕರಾದ ರಾಜೇಶ್,ಮೂಡನಡುಗೋಡು ಸೇವಾನಿರತೆ ಪ್ರಫುಲ್ಲಾ ದಡ್ಡಲಕಾಡು, ಜನಜಾಗೃತಿ ಸದಸ್ಯರಾದ ಸದಾನಂದ ಗೌಡ ಹಳೇಗೇಟು, ನಿವೃತ್ತ ಶಿಕ್ಷಕರಾದ ರಾಮಕೃಷ್ಣ ಪ್ರಭು, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಡೀಕಮ್ಮ ಕುಲಾಲ್,ಯೋಜನಾ ಪ್ರಮುಖರಾದ ಭಾಸ್ಕರ್ ಕುಲಾಲ್ ಕರೆಂಕಿ ಉಪಸ್ಥಿತರಿದ್ದರು.

ಯೋಜನೆ ತಾಲೂಕು ಕೃಷಿ ಅಧಿಕಾರಿ ಭಾಸ್ಕರ್ ಅವರು ಮಾಹಿತಿ ನೀಡಿದರು. ಮುಖ್ಯ ಶಿಕ್ಷಕ ರಾಘವೇಂದ್ರ ಬಿ.ಕುಮಾರ್  ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ತುಳಸಿನಿ ವಂದಿಸಿದರು. 

By suddi9

Leave a Reply

Your email address will not be published. Required fields are marked *