ಬಂಟ್ವಾಳ:ರಾ.ಹೆ.ಯ ಕೆಳಗಿನ ತುಂಬೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್ ಗೆ ಡಿಕ್ಕಿಯಾಗಿ, ಮೇಲಿಂದ ಹಾರಿ ವಿರುದ್ದ ರಸ್ತೆ ಮೇಲೆ ಬಿದ್ದ ಪರಿಣಾಮ ಕಾರು ಚಾಲಕ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.ಮೃತರನ್ನು ಉಳ್ಳಾಲ ತಾಲೂಕಿನ ಹರೇಕಳಗ್ರಾಮದ ಪಾವೂರು ನಿವಾಸಿಯಾದ ನೌಫಾಲ್ ( 34) ಎಂದು ಗುರುತಿಸಲಾಗಿದೆ.

ಬಿ.ಸಿ.ರೋಡಿನ ಕೈಕಂಬದಲ್ಲಿ ಉಸ್ಮಾನ್ ಎಂಬವರಿಂದ ಸ್ವಿಷ್ಟ್ ಕಾರನ್ನು ಖರೀದಿಸಿ ಮಂಗಳೂರು ಕಡೆಗೆ ಕಾರನ್ನು ಚಲಾಯಿಸಿಕೊಂಡು ತೆರಳುತ್ತಿದ್ದಾಗ ಕೆಳಗಿನ ತುಂಬೆ ಬಳಿ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಗೆ ಡಿಕ್ಕಿಯಾದ ರಭಸಕ್ಕೆ ಡಿವೈಡರ್ ಮೇಲೆಹತ್ತಿ ಬಳಿಕ ಬಲಭಾಗದ ರಸ್ತೆ ಮೇಲೆ ಬಿದ್ದಿದೆ.

ಈ ಸಂದರ್ಭ ಮಂಗಳೂರು ಕಡೆಯಿಂದ ಬರುತ್ತಿದ್ದ ಕಂಟೈನರ್ ಲಾರಿಯು ಕಾರಿಗೆ ಡಿಕ್ಕಿಯಾಗಿದೆ.ಘಟನೆಯಿಂದಾಗಿ ಕಾರು ಚಾಲಕ ನೌಫಲ್ ಗಂಭೀರವಾಗಿ ಗಾಯಗೊಂಡಿದ್ದು,ತಕ್ಷಣ ಸ್ತಳೀಯರು ಗಾಯಾಳುವನ್ನು ಕಾರಿನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದುರಾದರೂ, ಮಾರ್ಗ ಮಧ್ಯೆ ನೌಫಲ್ ಕೊನೆಯುಸಿರೆಳಿದಿರುವುದನ್ನು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.
ಬಂಟ್ವಾಳ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೌಫಲ್ ಅವರ ಅಕಾಲಿಕ ಸಾವಿಗೆ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
