ಬಂಟ್ವಾಳ : ತಾಲೂಕಿನ ಏಮಾಜೆ ದ. ಕ. ಜಿ. ಪಂ. ಕಿ. ಪ್ರಾ ಶಾಲೆಯಲ್ಲಿ “ಜ್ಞಾನವಾಹಿನಿ -2025” ಎಂಬ ವಿನೂತನ  ಯೋಜನೆಗೆ ಮಂಗಳೂರು  ಎ.ಜೆ ಸಂಶೋಧನಾ ಕೇಂದ್ರದ ಗ್ಯಾಸ್ಟ್ರೋ ಸರ್ಜನ್      ಡಾ. ಅಶ್ವಿನ್ ಆಳ್ವ ಚಾಲನೆ ನೀಡಿದರು.


ಶಾಲಾ ಅಭಿವೃದ್ಧಿ ಸಮಿತಿ  ಅಧ್ಯಕ್ಷೆ ಮಲ್ಲಿಕಾ ಗಣೇಶ್ ಆಚಾರ್ಯ ಅವರು ಮಾತನಾಡಿ,
ಈ ಯೋಜನೆಗೆ ಈಗಾಗಲೇ ಹಲವಾರುವಿದ್ಯಾಭಿಮಾನಿಗಳು  ಸಹಕಾರವನ್ನು ನೀಡುತ್ತಿದ್ದು, ಈ ಯೋಜನೆಗೆ ದೇಶ ವಿದೇಶಗಳಲ್ಲಿರುವ ನಮ್ಮೂರಿನ ವಿದ್ಯಾಭಿಮಾನಿಗಳ ಅತ್ಯುತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಹೇಳಿದರು.


  ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ ರಮೇಶ್ , ನೆಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ  ಸಮಿತ ಡಿ ಪೂಜಾರಿ, ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷ  ಹರೀಶ್ ಕುಲಾಲ್, ಪಂಚಾಯತ್ ಸದಸ್ಯರುಗಳಾದ  ಶಕೀಲಾ ಕೃಷ್ಣ ಮಿತ್ತ ಕೋಡಿ, ಧನಂಜಯ ಗೌಡ,  ಎಸ್. ಡಿ.ಎಂ. ಸಿ  ನಿಕಟ ಪೂರ್ವ ಉಪಾಧ್ಯಕ್ಷರಾದ ಶ್ರೀ ಪ್ರಸಾದ್ ಆಚಾರ್ಯ, ಶಾಲಾ ನಾಯಕಿ ರಿದಿಕಾ ಶೆಟ್ಟಿ, ಉಪ ನಾಯಕಿ ವರ್ಷ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು, ವಿದ್ಯಾರ್ಥಿ ಪೋಷಕರು, ಶಿಕ್ಷಣ ಪ್ರೇಮಿಗಳು  ಉಪಸ್ಥಿತರಿದ್ದರು.


ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ ರಮೇಶ್ ಸ್ವಾಗತಿಸಿ, ಸಹ ಶಿಕ್ಷಕ ಉದಯ ಚಂದ್ರ ವಂದಿಸಿದರು. ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿರಾದ ದೀಕ್ಷ, ಐಸಮ್ಮ ಸಹಕರಿಸಿದರು. 

One attachment • Scanned by Gmail

By suddi9

Leave a Reply

Your email address will not be published. Required fields are marked *