ಎಸ್‌ಸಿಐ ಬಂಟ್ವಾಳ ಅಧ್ಯಕ್ಷ ರಾಗಿ ತಾರಾನಾಥ ಕೊಟ್ಟಾರಿ ಆಯ್ಕೆ
ಬಂಟ್ವಾಳ: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಂತಾರಾಷ್ಟ್ರೀಯ ಸಂಸ್ಥೆಯ ಬಂಟ್ವಾಳ ನೇತ್ರಾವತಿ ಸಂಗಮ ಘಟಕದ ಅಧ್ಯಕ್ಷರಾಗಿ ತೇವು ತಾರಾನಾಥ ಕೊಟ್ಟಾರಿ ಆಯ್ಕೆ ಯಾಗಿದ್ದಾರೆ.

ಹಿರಿಯ ಜೇಸಿಗಳಾದ ಪಿ.ಮಹಮ್ಮದ್ ಆಡಳಿತ, ಸಂದೀಪ್ ಸಾಲ್ಯಾನ್ ಸಾರ್ವಜನಿಕ ಸಂಪರ್ಕ, ಮಹೇಶ ನಿಟಿಲಾಪುರ ತರಬೇತಿ ವಿಭಾಗದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ನ್ಯಾಯವಾದಿ ಶೈಲಜಾ ರಾಜೇಶ್,ಜೊತೆ ಕಾರ್ಯದರ್ಶಿ ಯಾಗಿ ಯೋಗೀಶ ಬಂಗೇರ ನೇಮಕವಾಗಿದ್ದಾರೆ. ನಿರ್ದೇಶಕರಾಗಿ ಸ್ಥಾಪಕ ಅಧ್ಯಕ್ಷ ಜಯಾನಂದ ಪೆರಾಜೆ,ಮಾಜಿ ಅಧ್ಯಕ್ಷ ಡಾ.ಆನಂದ ಬಂಜನ್ ನಿಯುಕ್ತಿಗೊಂಡಿದ್ದಾರೆ.ಹದಿನಾಲ್ಕು ಮಂದಿ ವಿವಿಧ ಪದಾಧಿಕಾರಿಗಳಾಗಿರುತ್ತಾರೆ ಎಂದು ಎಸ್‌ಸಿಐ ಪ್ರಕಟಣೆ ತಿಳಿಸಿದೆ. ಜೂ.29 ರಂದು ಬೆಳಿಗ್ಗೆ 10 ಗಂಟೆಗೆ ಬಿ.ಸಿ.ರೋಡಿನ ಅಕ್ಷಯ ಸಭಾಭವನದಲ್ಲಿ ನಡೆಯಲಿದೆ.



