ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಗೆ ೨೦೨೫-೨೬ನೇ ಸಾಲಿನಲ್ಲಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಆಗತ-ಸ್ವಾಗತ ಕಾರ್ಯಕ್ರಮವು ಶಾಲೆಯ ಮಧುಕರ ಸಭಾಂಗಣದಲ್ಲಿ ನಡೆಯಿತು. ಆರಂಭದಲ್ಲಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಆರತಿ ಬೆಳಗುವುದರ ಮೂಲಕ ಸ್ವಾಗತಿಸಲಾಯಿತು. ಅಭ್ಯಾಗತರು ದೀಪ ಪ್ರಜ್ವಲನೆ ಮಾಡಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕರ‍್ಯಕ್ರಮಕ್ಕೆ ಚಾಲನೆ ನೀಡಿದರು.

 ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರು ಹಾಗೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣದ ಮೂಲಕ ದೇಶದ ಪ್ರಗತಿ ಹಾಗೂ ಸಂಸ್ಕಾರಯುತ ಶಿಕ್ಷಣದಿಂದ ಉತ್ತಮ ಗುಣ ನಿರ್ಮಾಣ ಸಾಧ್ಯ” ಎಂದರು.

ಅತಿಥಿಯಾಗಿ ಭಾಗವಹಿಸಿದ್ದಬೆಂಗಳೂರು ಅಲಯನ್ಸ್ ವಿಶ್ವವಿದ್ಯಾನಿಲಯದ ರಿಜಿಸ್ಟರ್ ವಿಶ್ವನಾಥಯ್ಯ ಮಾತಂ ಮಾತನಾಡಿ,”ಮೌಲ್ಯಾಧಾರಿತ ಶಿಕ್ಷಣದಿಂದ ಭಾರತದ ಸಂಸ್ಕೃತಿ, ಪರಂಪರೆಯನ್ನು ಅಳವಡಿಸಿಕೊಳ್ಳಬೇಕೆಂದರು.ಕಾರ್ಕಳ ಬೋಳ ರಾಘವೇಂದ್ರ ಕಾಮತ್  ಪ್ರೈ. ಲಿಮಿಟೆಡ್ ನ ನಿರ್ದೇಶಕರಾದ  ವಿದ್ಯಾ ಕಾಮತ್ ಬೋಳ, ಬೆಳ್ತಂಗಡಿಯ ಧಾರ್ಮಿಕ ಮುಖಂಡರಾದ   ಕಿರಣ್ ಚಂದ್ರ ಪುಷ್ಪಗಿರಿ, ಮಂಗಳೂರು ಸಾವಿತ್ರಿ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ ನ ಆಡಳಿತ ನಿರ್ದೇಶಕರಾದ ವಿಶ್ವಾಸ್ ರಾವ್ ಉಚ್ಚಿಲ, ಅವರ ಪತ್ನಿ   ಪ್ರೇಕ್ಷಾ ವಿಶ್ವಾಸ ರಾವ್,ದೇರಳಕಟ್ಟೆ ಎ.ಬಿ ಶೆಟ್ಟಿ ಮೆಮೋರಿಯಲ್ ಇನ್ಸಿಟ್ಯೂಟ್ ಆಫ್  ಡೆಂಟಲ್ ಸೈನ್ಸ್ ನಿಟ್ಟೆ, ಇಲ್ಲಿನ ಪ್ರೊಫೆಸರ್  ಶಿಶಿರ್ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. 

 ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕಾರಣಿ ಸದಸ್ಯೆ ಡಾ| ಕಮಲ ಪ್ರಭಾಕರ್ ಭಟ್, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ, ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ ಶ್ರೀಮಾನ್, ಸಹ ಸಂಚಾಲಕರಾದ ರಮೇಶ್ ಶ್ರೀಮಾನ್,  ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲ್ ಎಂ ಉಪಸ್ಥಿತರಿದ್ದರು.

 ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳು ಅಗ್ನಿಹೋತ್ರಕ್ಕೆ ಘೃತಾಹುತಿಯನ್ನು ಮಾಡಿ, ಭಾರತಾಂಬೆಗೆ ಪುಷ್ಪಾರ್ಚನೆ ಮತ್ತು ಹಿರಿಯರಿಂದ ತಿಲಕ ಧಾರಣೆಯೊಂದಿಗೆ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ

೨೦೨೪-೨೫ನೇ ಸಾಲಿನ ಎಸ್,ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 

ಭುವಿ ಸ್ವಾಗತಿಸಿದರು,  ಅಂಕಿತ ವಂದಿಸಿದರು.ಚಿನ್ಮಯ್  ಕಾರ್ಯ ಕ್ರಮ ನಿರೂಪಿಸಿದರು. 

By suddi9

Leave a Reply

Your email address will not be published. Required fields are marked *