ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಬಂಟ್ವಾಳ ಇದರ ಸಿದ್ಧಕಟ್ಟೆ ವಲಯದ ಪಂಜಿಕಲ್ಲು ಬಾಲೇಶ್ವರ ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯ ಅನ್ನ ಛತ್ರ ಕಟ್ಟಡ ರಚನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದಿಂದ ಮಂಜರಾದ 1ಲ.ರೂ. ಅನುದಾನದ ಚೆಕ್ ನ್ನು ಹಸ್ತಾಂತರಿಸಲಾಯಿತು.

ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ ಅವರು ಗರಡಿಯ ಸಮಿತಿ ಸಹಾಯಧನದ ಚೆಕ್ ವಿತರಿಸಿದರು.
ಈ ಸಂಧರ್ಭದಲ್ಲಿ ಗರಡಿಯ ಸಮಿತಿಯ ಉಪಾಧ್ಯಕ್ಷರು ಕೇಶವ ಪೂಜಾರಿ, ಕೋಶಾಧಿಕಾರಿ ಜಯ ಕುಂದರ್, ಗ್ರಾಮಾಭಿವೃದ್ಧಿ ಯೋಜನೆಯ ಸಿದ್ಧ ಕಟ್ಟೆ ವಲಯ ಅಧ್ಯಕ್ಷ ರಾಧ ಕೃಷ್ಣ ಆಚಾರ್ಯ, ಸಮಿತಿಯ ಸದಸ್ಯರಾದ ಪ್ರಕಾಶ್ ಮಡಿವಾಳ, ಜನಜಾಗೃತಿ ಸಮಿತಿ ಸದಸ್ಯ ಶಶಿಧರ, ಆಚಾರಿಪಲ್ಕೆ, ಒಕ್ಕೂಟ ಅಧ್ಯಕ್ಷ ಆನಂದ ಪೂಜಾರಿ ವಲಯ ಮೇಲ್ವಿಚಾರಕಿ ಹರಿಣಾಕ್ಷಿ, ಸೇವಾಪ್ರತಿನಿಧಿಳ ಭವ್ಯಾ ಉಪಸ್ಥಿತರಿದ್ದರು
