ಬಂಟ್ವಾಳ: ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಆಯೋಕಿಸಲಾಗಿದ್ದ ಕವಿ, ಸಾಹಿತಿ, ಸಂಘಟಕರಾಗಿದ್ದ ದಿ. ಬಿ.ತಮ್ಮಯ್ಯ ನೆನಪಿನ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.
ಈ ಸಾಹಿತ್ಯ ಸ್ಪರ್ಧೆಯು ಎರಡು ಪ್ರಕಾರಗಳನ್ನು ಕೇಂದ್ರೀಕರಿಸಿ ನಡೆಸಲಾಗಿದ್ದು, ‘ಅತೀ ಸಣ್ಣಕಥೆ’ ಸ್ಪರ್ಧೆಯಲ್ಲಿ ಸುಲ್ತಾನ್ ಮಾನ್ಸೂರು ಮಂಚಿ ಅವರ ಸಣ್ಣಕಥೆ “ಜಾಥಾ” ಪ್ರಥಮ, ಸ್ಮಿತಾ ಅಮೃತರಾಜ್ ಸಂಪಾಜೆ ಅವರ ಸಣ್ಣಕಥೆ “ಸ್ಫೋಟ” ದ್ವಿತೀಯ ಬಹುಮಾನವನ್ನು ಪಡೆದಿದೆ ಎಂದು ಪ್ರಕಟಣೆ ತಿಳಿಸಿದೆ.
ಲಲಿತ ಪ್ರಬಂಧ ಸ್ಪರ್ಧೆಯಲ್ಲಿ *ರೂಪಕಲಾ ಆಳ್ವ ಅವರ “ಬೂಬು ಎಂಬ ಮರಿ-ಮೊಮ್ಮಗಳು” ಪ್ರಥಮ , ನಳಿನಿ ಭೀಮಪ್ಪ ದಾರವಾಡ ಅವರ “ಮುಡಿಯಿಂದ ಜಾರುತಿಹವೋ…!” ಲಲಿತ ಪ್ರಬಂಧ ದ್ವಿತೀಯ ಬಹುಮಾನವನ್ನು ಪಡೆದಿದೆ.
ಈ ಸ್ಪರ್ಧೆಗಳಲ್ಲಿ ನಾಡಿನ ಹಿರಿಯ,ಕಿರಿಯ ಸಾಹಿತಿಗಳು ಸೇರಿದಂತೆ ನೂರಕ್ಕೂ ಹೆಚ್ಚಿನ ಪ್ರವೇಶಗಳು ಬಂದಿತ್ತು. ಸ್ಪರ್ಧೆಯ ವಿಜೇತರಿಗೆ ಯುವವಾಹಿನಿ ಆಯೋಜಿಸುವ ಕಾರ್ಯಕ್ರಮದಲ್ಲಿ ನಗದು ಪ್ರಶಸ್ತಿ ಪತ್ರದೊಂದಿಗೆ ಅಭಿನಂದಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
