ಸರಕಾರಿ ಶಾಲೆ ಉಳಿಸಲು ಆಂಗ್ಲ ಮಾಧ್ಯಮ ಅತ್ಯಗತ್ಯ: ಪ್ರವೀಣ್ ಕುಮಾರ್ ಮುಗುಳಿ
ಬಂಟ್ವಾಳ : ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಸರಕಾರಿ ಶಾಲೆಗಳು ಉಳಿಯಬೇಕಾದರೆ ಸರಕಾರಿ ಶಾಲೆಗಳಲ್ಲು ಆಂಗ್ಲ ಮಾಧ್ಯಮ ಪ್ರಾರಂಭಿಸುವುದು ಅತ್ಯಗತ್ಯವಾಗಿದೆ ಎಂದು ಹೈಕೋರ್ಟ್ ನ್ಯಾಯವಾದಿ ಪ್ರವೀಣ್ ಕುಮಾರ್ ಮುಗುಳಿ ಹೇಳಿದರು.

ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ನೆಟ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ ( ಎಲ್ ಕೆ ಜಿ )ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪೂರ್ವ ಪ್ರಾಥಮಿಕ ತರಗತಿಗಳಿಗೆ ದಾಖಲಾದ ಮಕ್ಕಳನ್ನು ಮೆರವಣಿಗೆ ಮೂಲಕ ಕರೆತಂದು ಆರತಿ ಬೆಳಗಿಸಿ ಪುಷ್ಪದಳ ಸಿಂಪಡಿಸಿ ನೂತನ ತರಗತಿಗೆ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಸಹಕಾರ ನೀಡಿದವರನ್ನು ಗೌರವಿಸಲಾಯಿತು.ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಭಾಸ್ಕರ್ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಹಿರಿಯರಾದ ರಾಮಚಂದ್ರ ಬನ್ನಿಂತಾಯ, ಭಾರತದ ಏಕೈಕ ಮಲ್ಟಿಪಲ್ ಇಂಡಿಯನ್ ಗ್ರಾಫ್ನಲ್ ಕಾರ್ ಚಾಂಪಿಯನ್ ಅಶ್ವಿನಿ ನಾಯ್ಕ್, ಪಂಚಾಯತ್ ಮಾಜಿ ಸದಸ್ಯರಾದ ಗುರುವಪ್ಪಗೌಡ, ಲೋಕನಾಥ್ ಕುಲಾಲ್ ನೈತಿಕ ಶಿಕ್ಷಣ ಬೋಧಕಿ ಮುಕಾಂಬಿಕಾ ರಾವ್, ಗಣ್ಯರಾದ ರೋಟರಿ ಕ್ಲಬ್ ಬಂಟ್ವಾಳ ಸಿಟಿ ಇದರ ಸದಸ್ಯರಾದ ರಮೇಶ್ ಪೂಜಾರಿ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಭವ್ಯ,ಮಾಜಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರುಗಳಾದ ಮಾಲತಿ, ಚಂದ್ರಿಕಾ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅನಿಲ್ ಕುಮಾರ್ ಉಪಸ್ಥಿತರಿದ್ದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶೋಭಲತಾ ಬಿ ಸ್ವಾಗತಿಸಿ, ಕಲಾ ಶಿಕ್ಷಕ ಜಯರಾಮ್ ನಾವಡ ಪ್ರಸ್ತಾವನೆಗೈದರು. ಎಲ್ ಕೆ ಜಿ ಶಿಕ್ಷಕಿ ಸುಮಾನ ವಂದಿಸಿದರು. ಸಹ ಶಿಕ್ಷಕ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ನಿಶ್ಮಿತ, ಅಶ್ವಿನಿ,ಇಂದಿರಾ ಮತ್ತು ಶಿಕ್ಷಕರಾದ ಮಹಮ್ಮದ್ ಅಖೀಲ್ ಸಹಕರಿಸಿದರು.



