ಬಂಟ್ವಾಳ: ಮಾರ್ನಬೈಲು ಅಯ್ಯಪ್ಪ ಸ್ವಾಮಿ ಮಂದಿರದ ಅಭಿವೃದ್ಧಿ ಹಾಗೂ ಜಮೀನು ಖರೀದಿ ಸಂಕಲ್ಪ ಸಿದ್ಧಿಗಾಗಿ೧೮ ಗುರುವಾರಗಳ ಪರ್ಯಂತ ನಡೆಯಲಿರುವ ಪಂಚಾರತಿ ಸೇವೆಯ ೯ನೇ ವಾರದ ಪಂಚಾರತಿ ಸೇವೆ ನಡೆಯಿತು.

ಪಂಚ ಅಭ್ಯಾಗತರಾಗಿ ಶ್ರೀ ಕ್ಷೇತ್ರ ನಂದಾವರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕಾಂತಾಡಿಗುತ್ತು, ಸದಸ್ಯ ಮೋಹನದಾಸ ಪೂಜಾರಿ ಬೊಳ್ಳಾಯಿ, ಉದ್ಯಮಿ ಶೇಖರ ಪೂಜಾರಿ ಬಲ್ನಾಡ್, ಉಮೇಶ್ ಬಲ್ನಾಡ್, ಗುತ್ತಿಗೆದಾರ ಗಣೇಶ್ ಕಾಮಾಜೆ ಭಾಗವಹಿಸಿ, ಪಂಚಾರತಿ ಬೆಳಗಿ ಶುಭ ಹಾರೈಸಿದರು.
ಅಯ್ಯಪ್ಪ ಸ್ವಾಮಿ ಮಂದಿರದ ಆಡಳಿತ ಟ್ರಸ್ಟ್ ಗೌರವಾಧ್ಯಕ್ಷರಾದ ಸಂಜೀವ ಗುರುಸ್ವಾಮಿ ಕೃಷ್ಣ ಗುರುಸ್ವಾಮಿ, ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಅಶೋಕ್ ಗಟ್ಟಿ ನಂದಾವರ, ಕೋಶಾಧಿಕಾರಿ ರಂಜಿತ್ ರಾವ್, ಟ್ರಸ್ಟ್ ಕಾರ್ಯದರ್ಶಿ ಯಶವಂತ ಕೆ. ಪುತ್ತೂರು, ಭಜನಾ ಮಂಡಳಿ ಅಧ್ಯಕ್ಷ ಸುರೇಶ್ ಕುಲಾಲ್ ಕಲ್ಲಾಡಿಗೋಳಿ, ಕಾರ್ಯದರ್ಶಿ ನಿತಿನ್ ಕುಮಾರ್ ಮಾರ್ನಬೈಲು, ಪದಾಧಿಕಾರಿಗಳಾದ ಯೋಗೀಶ್ ಗಟ್ಟಿ ನಂದಾವರ, ನಾಗೇಶ್ ಕುಲಾಲ್ ಕೋಮಾಲಿ, ರಾಜೀವ ಕೊಟ್ಟಾರಿ ಕಲ್ಲಡ್ಕ, ವಿಶ್ವನಾಥ ಆಚಾರ್ಯ ಮಾರ್ನಬೈಲು, ತಾರಾ ಭಾಸ್ಕರ್ ದೇವಾಡಿಗ, ಜಯಾನಂದ ಪಾಡಿ, ವಸಂತ ಪೂಜಾರಿ ನಾಗನವಳಚ್ಚಿಲು, ದಯಾನಂದ ಬಿ.ಎಂ. ಕಂದೂರು, ಅಕ್ಷಯ್ ಕಾರಾಜೆ, ಸೋಮನಾಥ ಗಟ್ಟಿ ಮಾರ್ನಬೈಲು, ಸಂತೋಷ್ ಕೋಟ್ಯಾನ್ ದಾಸರಗುಡ್ಡೆ, ಶ್ರೀನಿವಾಸ ನಾಯ್ಕ ದಾಸರಗುಡ್ಡೆ, ಗೋಪಿನಾಥ ನಾಯ್ಕ, ವಸಂತ ಕೊಲ್ಲುಕೋಡಿ, ಶಕುಂತಲಾ ಅಶೋಕ್ ಗಟ್ಟಿ, ರಕ್ಷಿತಾ ರಂಜಿತ್ ರಾವ್, ಸರೋಜ ವಿಶ್ವನಾಥ ಆಚಾರ್ಯ, ಸಂತೋಷ್ ಆಚಾರ್ಯ ನಾಗನವಳಚ್ಚಿಲು, ಪ್ರಸನ್ನ ಆಚಾರ್ಯ, ಪ್ರಶಾಂತ ಆಚಾರ್ಯ ಸಜೀಪ, ದೀಪ್ತೇಶ್ ಮೆಲ್ಕಾರ್, ಮಾಧವ ನಾಯ್ಕ್ ದಾಸರಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು. ಕೇಶವ ಮಾಸ್ತರ್ ಮಾರ್ನಬೈಲು ಪ್ರಸ್ತಾವನೆಗೈದು, ಕಾರ್ಯಕ್ರಮ ನಿರೂಪಿಸಿದರು.
