ಬಂಟ್ವಾಳ: ತಾಲೂಕಿನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಸ್ಯಾನಿಟರಿ ಡೈಪರ್, ನ್ಯಾಪ್‌ಕಿನ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಕುರಿತು ಸಮಾಲೋಚನಾ ಸಭೆಯು ಬಂಟ್ವಾಳ ತಾ.ಪಂ.ನ ಎಸ್ ಜಿಎಸ್ ವೈ ಸಭಾಂಗಣದಲ್ಲಿ ನಡೆಯಿತು.

ಪುರಸಭಾಧ್ಯಕ್ಷರಾದ ವಾಸು ಪೂಜಾರಿ ಲೊರೆಟ್ಟೋ ಅವರು ಸಭಾಧ್ಯಕ್ಚತೆ ವಹಿಸಿದ್ದರು.ಸಭೆಯಲ್ಲಿ ಆರ್ ಎಂಕೆ ವೈ ಏನರ್ಜಿ ಮತ್ತು ಎನ್ ವಾಯರ್ ಮೆಂಟ್ ಲಿ.ನ ಪ್ರಶಾಂತ್ ನಾಯಕ್ ಅವರು ಈ ಬಗ್ಗೆ ಅವರು ಮಾಹಿತಿ ನೀಡಿದರು.
ಪುರಸಭೆಯ ಮುಖ್ಯಾಧಿಕಾರಿ ನಜೀರ್ ಅಹ್ಮದ್, ತಾ.ಪಂ.ಸಹಾಯಕ ನಿರ್ದೇಶಕರಾದ ವಿಶ್ವನಾಥ್ ಬಿ.(ಗ್ರಾ.ಉ), ಸಹಾಯಕ ನಿರ್ದೇಶಕರಾದ ವಿಜಯ್‌ಶಂಕರ್ ಆಳ್ವ (ಪಂ.ರಾ) ಅವರು ಉಪಸ್ಥಿತರಿದ್ದರು.
ತಾಲೂಕು ಪಂಚಾಯತ್ ವ್ಯವಸ್ಥಾಪಕರಾದ ಪ್ರಕಾಶ್ ಪಿ., ಪುದು, ತುಂಬೆ, ಸಜಿಪಮುನ್ನೂರು, ನರಿಕೊಂಬು, ಗೋಳ್ತಮಜಲು, ಕಳ್ಳಿಗೆ, ಬಾಳ್ತಿಲ, ಮಾಣಿ, ವಿಟ್ಲಮುಡ್ನೂರು, ಇಡ್ಕಿದು, ಅಮ್ಟಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿಡಿಒಗಳು, ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ, ಆರೋಗ್ಯಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.
