ಪಲ್ಲಮಜಲು ಶ್ರೀ ಮಹಾಪವಮಾನ ಯಾಗಕ್ಕೆ ಚಪ್ಪರ ಮಹೂರ್ತ
ಬಂಟ್ವಾಳ: ಹಿಂದೂ ಸಮಾಜದ ಎಲ್ಲಾ ಸಮುದಾಯಗಳ ನಡುವೆ ಸಾಮರಸ್ಯ ಸಾಧಿಸುವ ದೃಷ್ಟಿಯಿಂದ ಯಾಗ ನಡೆಸಲಾಗುತ್ತಿದೆ. ದ.ಕ. ಜಿಲ್ಲೆಯ ಎಲ್ಲಾ ಋತ್ಯುಜರು ಮಂತ್ರಪಠಣದಲ್ಲಿ ಪಾಲ್ಗೊಳ್ಳಲಿದ್ದು, ಅತ್ಯಂತ ಶಕ್ತಿಶಾಲಿಯಾದಂತ ಈ ಯಾಗಕ್ಕೆ ಜಿಲ್ಲೆಯ ಜನರು ಸಾಕ್ಷಿಯಾಗಲಿದ್ದಾರೆ ಎಂದು ಶ್ರೀ ಮಹಾಪವಮಾನ ಯಾಗ ಮಾತೃ ಸಮಿತಿ ಅಧ್ಯಕ್ಷೆ ಸುಲೋಚನಾ ಜಿ.ಕೆ. ಭಟ್ ನುಡಿದರು.

ಅವರು ಪಲ್ಲಮಜಲು ಶ್ರೀರಾಮ ಭಕ್ತಾಂಜನೇಯ ಭಜನಾ ಮಂದಿರದಲ್ಲಿ ಮೇ ೧೬ರಿಂದ ೧೮ರ ವರೆಗೆ ನಡೆಯಲಿರುವ ೧೦೮ ಪವಮಾನ ಪಾರಾಯಣ ಸಹಿತ ಶ್ರೀ ಮಹಾಪವಮಾನ ಯಾಗ, ೧೦೮ ಲಕ್ಷ ಶ್ರೀರಾಮ ತಾರಕ ಮಂತ್ರ ಜಪಯಜ್ಞ, ಆಂಜನೇಯ ದೇವರಿಗೆ ಸಹಸ್ರ ಕದಳಿ ಯಾಗ ಮತ್ತು ವಿಷ್ಣು ಸಹಸ್ರನಾಮಾರ್ಚನೆಗೆ ಶನಿವಾರ ನಡೆದ ಚಪ್ಪರ ಮುಹೂರ್ತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾಪವಮಾನ ಯಾಗ ಸಮಿತಿ ಅಧ್ಯಕ್ಷ ಸಂದೇಶ್ ಶೆಟ್ಟಿ ಅರೆಬೆಟ್ಟು, ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಕೋಶಾಧಿಕಾರಿ ಹರಿಪ್ರಸಾದ್ ಭಂಡಾರಿಬೆಟ್ಟು, ಸಂಚಾಲಕ ಸಂದೇಶ್ ದರಿಬಾಗಿಲು, ಪ್ರಮುಖರಾದ ಪಿ.ಸೇಸಪ್ಪ ದಾಸಯ್ಯ, ದಿವಾಕರ ಶೆಟ್ಟಿ ಕುಪ್ಪಿಲ, ರಮೇಶ್ ಸಾಲ್ಯಾನ್, ಅನಿಲ್ ಪಂಡಿತ್ ವಳವೂರು, ಗಣೇಶ್ ಸುವರ್ಣ ತುಂಬೆ, ಸತೀಶ್ ಶೆಟ್ಟಿ ಮೊಡಂಕಾಪು, ಆಶಾ ಪ್ರಸಾದ್ ರೈ ಬಿ.ಸಿ.ರೋಡು, ಜಯಶ್ರೀ ಕರ್ಕೇರಾ ಅಬ್ಬೆಟ್ಟು, ಮಣಿಮಾಲ ಬಿ. ಶೆಟ್ಟಿ, ಶೇಖರ್ ಶೆಟ್ಟಿ ಅಮ್ಟಾಡಿ, ಗಣೇಶ್‌ದಾಸ್ ಕಾಮೇರಕೋಡಿ, ಸತೀಶ್ ಪಲ್ಲಮಜಲು, ಜಗದೀಶ್ ಹೊಳ್ಳ, ಉಮೇಶ್ ಗಾಂದೋಡಿ ಮತ್ತಿತರರು ಉಪಸ್ಥಿತರಿದ್ದರು.



