ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಮಂಜಲ್ ಪಾದೆ ನೇತ್ರಾವತಿ ಬಳಗದ ಆಶ್ರಯದಲ್ಲಿ ಹೊನಲು ಬೆಳಕಿನ ಸೂಪರ್ ಸಿಕ್ಸ್ ಆರು ತಂಡಗಳ ಲೀಗ್ ಮಾದರಿಯ ಸೀಸನ್ ತ್ರೀ ಕ್ರಿಕೆಟ್ ಪಂದ್ಯಾಟವನ್ನು ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್  ಉದ್ಘಾಟಿಸಿ ಚಾಲನೆ ನೀಡಿದರು.  ಇದಕ್ಕು ಮೊದಲು ಇತ್ತೀಚಿಗೆ ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದನ ಕೃತ್ಯದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

2024 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿ ಗ್ರಾಮಕ್ಕೆ ಹೆಮ್ಮೆಯನ್ನು ತಂದುಕೊಟ್ಟ ಕು. ಪ್ರಾರ್ಥನಾ, ಕು. ನಿಖಿತ ಇವರನ್ನು  ಸನ್ಮಾನಿಸಲಾಯಿತು.
ಪ್ರಗತಿಪರ ಕೃಷಿಕ ಅಂದಾಡಿ ಸೀತಾರಾಮ ಗಟ್ಟಿ ,ಸಂಘದ ಅಧ್ಯಕ್ಷ ಶ್ರೇಯಸ್ ಗಟ್ಟಿ, ಪಂಚಾಯತ್ ಸದಸ್ಯರಾದ ಸರೋಜಿನಿ ಪೂಜಾರಿ, ಸುಂದರ ಪೂಜಾರಿ, ಶಾರದ, ಯುವಕ ಸಂಘದ ಅಧ್ಯಕ್ಷ ಪರಮೇಶ್ವರ ಪೂಜಾರಿ,ತಿಮ್ಮಪ್ಪ ಗಟ್ಟಿ,ದಯಾನಂದ ಕುಲಾಲ್ ,ಧರ್ಣಪ್ಪ  ಗಟ್ಟಿ,ಶೇಖರಗಟ್ಟಿ ಮೊದಲಾದವರು ಉಪಸ್ಥಿತರಿದ್ದರು 

By suddi9

Leave a Reply

Your email address will not be published. Required fields are marked *