ಬಂಟ್ವಾಳ:ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಂಸ್ಥೆ ನೆತ್ತರಕೆರೆ ನವೋದಯ ಮಿತ್ರ ಕಲಾ ವೃಂದ (ರಿ) ಹಾಗೂನೇತ್ರಾವತಿ ಮಾತೃ ಮಂಡಳಿಯ”38ನೇ ವಾರ್ಷಿಕ ಸವಿ ಸಂಭ್ರಮ”ವು ನೆತ್ತರಕೆರೆ ಶಾಲಾ ಮೈದಾನದಲ್ಲಿ ನಡೆಯಿತು.

ಈ ಪ್ರಯುಕ್ತ ರಾತ್ರಿ ನಡೆದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಿಧಾನಪರಿಷತ್ ಸದಸ್ಯ  ಕಿಶೋರ್ ಕುಮಾರ್ ಪುತ್ತೂರು ಅವರು ವಹಿಸಿ ಶುಭ ಹಾರೈಸಿದರು.ಮೇರಮಜಲು ಗ್ರಾ.ಪಂ.ಅಧ್ಯಕ್ಷ ಸತೀಶ್ ನಾಯ್ಗ ಕೊಡ್ಮಾಣ್‌ಕೋಡಿ,ಸಂಸ್ಕಾರ ಭಾರತಿ‌ ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿ,ಶಾಲಾ ಮುಖ್ಯ ಶಿಕ್ಷಕಿ ಸೇಲ್ವಿಯ ಬ್ರಿಗ್ಸ್, ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ , ಮಾತೃ ಮಂಡಳಿಯ ಅಧ್ಯಕ್ಷೆ ಮಾಲತಿ ಚಂದ್ರಹಾಸ ರವರು ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ  ರವೀಂದ್ರ ಕಂಬಳಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸದಾಶಿವ ಡಿ.ತುಂಬೆ ಅವರನ್ನು ಅಭಿನಂದಿಸಲಾಯಿತು.
ಅದೇರೀತಿ ಆರ್ ಎಸ್ ಎಸ್ ಮುಖಂಡ ದಿವಂಗತ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಅವರಬಹೆಸರಿನಲ್ಲಿ ಪ್ರತಿಭಾ ಪುರಸ್ಕಾರ ಹಾಗೂ,ಬಂಟ್ವಾಳ ತಾಲೂಕಿನ ಸರಕಾರಿ ಶಾಲೆಯಲ್ಲಿ 2023-24  ಸಾಲಿನ  ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ  ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಲಾದ ಕ್ರೀಡೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ರವೀಂದ್ರ ಯು ಜಿ ಸ್ವಾಗತಿಸಿ, ಸಂಚಾಲಕ ದಾಮೋದರ ನೆತ್ತರಕೆರೆ ಪ್ರಸ್ತಾವನೆಗೈದರು.
ಶ್ರೀಧರ್ ಹೆಚ್ ವರದಿ ವಾಚಿಸಿದರು. ವಿಶ್ವನಾಥ ಕುಲಾಲ್ ಸನ್ಮಾನ ಪತ್ರ ವಾಚಿಸಿದರು, ಕು.ಅಶ್ವಿನಿ ಬಹುಮಾನಿತರ ಪಟ್ಟಿ ಓದಿದರು, ಮಹೇಶ್ ಶೆಟ್ಟಿಗಾರ್ ವಂದಿಸಿದರು, ಸಂತೋಷ್ ಕುಲಾಲ್ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು.
ಅಂದು  ಬೆಳಿಗ್ಗೆ ಅಶ್ವತ್ಥಕಟ್ಟೆಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
ಮಧ್ಯಾಹ್ನ  ಮಹಾಪೂಜೆ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆಯು ನಡೆಯಿತು.
ಸಂಜೆ ನೆತ್ತರಕೆರೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ನೃತ್ಯ ಸಿಂಚನ ಬಳಿಕ
ಸಂಘದ ಸದಸ್ಯರು ಮತ್ತು ಮಾತೃ ಮಂಡಳಿಯ ಸದಸ್ಯೆಯರಿಂದ “ಭಾರತ ದರ್ಶನ ದೃಶ್ಯರೂಪಕ” ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಬಳಿಕ ಸಂಘದ ಹಾಗೂ ಅತಿಥಿ ಕಲಾವಿದರಿಂದ ತುಳು ನಾಟಕ ಪ್ರದರ್ಶನಗೊಂಡಿತು. 

By suddi9

Leave a Reply

Your email address will not be published. Required fields are marked *