ಮಂಗಳೂರು: ಜಿಲ್ಲೆಯಲ್ಲಿ ಮಾಂಸದ ಅಂಗಡಿ ಲೈಸನ್ಸ್ ಪಡೆದು ದನದ ಮಾಂಸ ಮಾರಾಟ; ಭಜರಂಗದಳ ಆರೋಪ

ಮಂಗಳೂರು: ಜಿಲ್ಲೆಯಲ್ಲಿ ಮಾಂಸದ ಅಂಗಡಿ ಲೈಸನ್ಸ್ ಪಡೆದು ದನದ ಮಾಂಸ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಭಜರಂಗದಳ ಸಂಘಟನೆ ಗಂಭೀರ ಆರೋಪವನ್ನು ಮಾಡಿದೆ. ಈ ಬಗ್ಗೆ ಮಂಗಳೂರಿನಲ್ಲಿ ವಿ.ಎಚ್.ಪಿ ಪ್ರಾಂತ ಗೋ ರಕ್ಷಾ ಪ್ರಮುಖ್ ಸುನಿಲ್ ಕೆ.ಆರ್ ಹೇಳಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಗೋಮಾಂಸ ಮಾಫಿಯಾ ಕಾರ್ಯಾಚರಿಸುತ್ತಿದೆ. ಕಳೆದ ಎರಡು ವಾರಗಳಲ್ಲಿ 4 ಕಡೆ ಅಕ್ರಮ ಗೋಮಾಂಸ ಸಾಗಾಟವನ್ನು ನಮ್ಮ ಕಾರ್ಯಕರ್ತರು ತಡೆದಿದ್ದಾರೆ.
ಅಕ್ರಮ ಕಸಾಯಿಖಾನೆಗಳು ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ.ಸುರತ್ಕಲ್, ಜೋಕಟ್ಟೆ,ತಣ್ಣೀರುಬಾವಿ,ಕುದ್ರೋಳಿ,ಫರಂಗಿಪೇಟೆ, ಸೂರಲ್ಪಾಡಿ,ಹಂಡೇಲು,ಕಾರ್ನಾಡಿನಲ್ಲಿ ಅಕ್ರಮ ಕಸಾಯಿಖಾನೆ ನಡೆಯುತ್ತಿದೆ. ಅಕ್ರಮ ಕಸಾಯಿಖಾನೆಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ವಿಫಲವಾಗಿದೆ.
ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಹಲವು ಕಡೆ ದನದ ಮಾಂಸ ಮಾರಾಟ ಮಾಡಲಾಗುತ್ತಿದೆ.
ಮಾಂಸದ ಅಂಗಡಿಯ ಲೈಸನ್ಸ್ ಪಡೆದು ದನದ ಮಾಂಸ ಮಾರುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದರ ಮೇಲೆ ನಿಗಾ ಇಟ್ಟು ಗೋಮಾಂಸ ಸರಬರಾಜು ಮಾಡುವ ಅಕ್ರಮ ಕಸಾಯಿಖಾನೆ ಗುರುತಿಸಬೇಕು.
ಕಸಾಯಿಖಾನೆ ಕಟ್ಟಡಗಳನ್ನು ಮುಟ್ಟುಗೋಲು ಹಾಕಬೇಕು.ಕ್ರಮ ಕೈಗೊಳ್ಳದಿದ್ದರೆ ಇದರ ವಿರುದ್ಧ ವಿ.ಎಚ್.ಪಿ, ಭಜರಂಗದಳ ಉಗ್ರ ಪ್ರತಿಭಟನೆ ನಡೆಸುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.