ಎಚ್ಚರ.. ಎಚ್ಚರ…ರಾಜ್ಯಕ್ಕೆ ವಕ್ಕರಿಸಿದ ಮತ್ತೊಂದು ವೈರಸ್, ಬೆಕ್ಕುಗಳಿಗೆ ಎಫ್ಪಿವಿ ವೈರಸ್

ರಾಜ್ಯಕ್ಕೆ ವಕ್ಕರಿಸಿದ ಮತ್ತೊಂದು ವೈರಸ್, ಈಗ ಹಕ್ಕಿಯಿಂದಲ್ಲಾ, ಬೆಕ್ಕಿನಿಂದ , ಹೌದು ಬೆಕ್ಕುಗಳಿಗೆ ಮಾರಣಾಂತಿಕ ಎಫ್ಪಿವಿ ವೈರಸ್ ಸೋಂಕಿನಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಬೆಕ್ಕುಗಳು ಸಾವನ್ನಪ್ಪುತ್ತಿವೆ ಬೆಕ್ಕುಗಳು. ಜಿಲ್ಲೆಯಲ್ಲಷ್ಟೇ ಅಲ್ಲದೆ, ರಾಜ್ಯದ ವಿವಿದೆಡೆ ವೈರಸ್ ಸೋಂಕು ಹರಡುತ್ತಿದೆ. ರಾಯಚೂರಿನಲ್ಲಿ ಕಳೆದ ಒಂದು ತಿಂಗಳಲ್ಲಿ ನೂರಕ್ಕೂ ಹೆಚ್ಚು ಬೆಕ್ಕುಗಳಲ್ಲಿ ವೈರಾಣು ಪತ್ತೆಯಾಗಿದೆ.ಸೋಂಕು ಹರಡುತ್ತಿರುವುದು ತಿಳಿದುಬಂದಿದೆ.
ಒಂದು ಕಡೆ 10 ಬೆಕ್ಕುಗಳಿದ್ದರೆ, ಆ ಪೈಕಿ ಒಂದು ಬೆಕ್ಕಿಗೆ ವೈರಸ್ ಸೋಂಕು ತಗಲಿದರೆ ಕೆಲವೇ ಸೆಕೆಂಡುಗಳಲ್ಲಿ ಸಮೀಪದ ಎಲ್ಲಾ ಬೆಕ್ಕುಗಳಿಗೂ ವೈರಸ್ ಹರಡುತ್ತದೆ. ಇದರಿಂದಾಗಿ ಬೆಕ್ಕು ಸಾಕಾಣಿಕೆ ಮಾಡುವವರಿಗೆಬೆ, ಕ್ಕುಗಳನ್ನು ಹೊಂದಿರುವವರಿಗೆ ಆತಂಕ ಉಂಟಾಗಿದೆ.