ಗೋಸಂರಕ್ಷಣೆ ನಮ್ಮೆಲರ ಹೊಣೆ: ಪ್ರಸಾದ್ ಕುಮಾರ್ ರೈ,ಬಿ.ಸಿ.ರೋಡಿನಲ್ಲಿ ನಂದಿ ರಥಯಾತ್ರೆ
ಬಂಟ್ವಾಳ: ಹಿಂದೂ ಸಮಾಜ,ಸಂಸ್ಕೃತಿಯ ಮೇಲೆ ನಿರಂತರವಾಗಿ ಅಕ್ರಮಣಗಳಾಗುತ್ತಿದ್ದರೂ, ಇವೆಲ್ಲವನ್ನು ಹಿಂದೂ ಸಮಾಜ ಮೆಟ್ಟಿ ನಿಂತಿದ್ದು,ಗೋ ಸಂರಕ್ಷಣೆಯು ನಮ್ಮೆಲ್ಲರ ಹೊಣೆಯಾಗಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ,ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಹೇಳಿದ್ದಾರೆ.

ಗೋಸೇವಾ ಗತಿ ವಿಧಿ ಕರ್ನಾಟಕ ,ರಾಧ ಸುರಭಿ ಗೋಮಂದಿರ , ರಾಷ್ಟ್ರೀಯ ಗೋಸೇವಾ ಸಂಸ್ಥಾನ್ ಟ್ರಸ್ಟ್ (ರಿ) ನಂದಿ ರಥಯಾತ್ರೆ ಆಯೋಜನಾ ಸಮಿತಿ ಬಿ.ಸಿ.ರೋಡು ಸಮಿತಿ ವತಿಯಿಂದ ಶುಕ್ರವಾರ ರಾತ್ರಿ ಬಿ.ಸಿ.ರೊಇಡಿನ ಶ್ರೀ ರಕ್ತೇಶ್ವರೀ ದೇವಸ್ಥಾನದ ವಠಾರದಲ್ಲಿ ಜರಗಿದ ನಂದಿರಥ ಯಾತ್ರೆ ಶೋಭಾಯಾತ್ರೆ ,ವಿಷ್ಣು ಸಹಸ್ರ ನಾಮ ಪಾರಾಯಣ ಹಾಗೂ ಗೋಕಥೆ ಬಗೆಗಿನ ಸಾಮೂಹಿಕ ಸಭಾ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣಗೈದರು.
ರಾ.ಸ್ವ.ಸೇ.ಸಂಘಕ್ಕೆ 100 ವರ್ಷ ಪೂರೈಸಿರುವ ಹಾಗೂ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾದ ಈ ಕಾಲಘಟ್ಟದಲ್ಲಿ ಭಕ್ತಿಭೂಷಣದಾಸ್ ಸ್ವಾಮೀಜಿಯವರ ನೇತೃತ್ವದಲ್ಲಿ ಸಂಘದ ಕಲ್ಪನೆಯಾಗಿರುವ ನಂದಿರಥಯಾತ್ರೆ ಆಯೋಜಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದ ಅವರು ನಮ್ಮ ನೆಲ,ಜಲ,ಬದುಕು ಶ್ರೇಷ್ಠತೆಗೇರಬೇಕಾದರೆ ಗೋಸಂತತಿಯ ಉಳಿವನ ಅಗತ್ಯ ಮತ್ತು ಅನೀವಾರ್ಯತೆ ಇದೆ.ನಂದಿ ರಥಯಾತ್ರೆಯಿಂದ ದೊಡ್ಡ ಕ್ರಾಂತಿಯಾಗಲಿದೆ ಎಂದರು.
ಗೋಸಂರಕ್ಷಕರು ಇದ್ದಂತೆ ಗೋಕಟುಕರ ಸಂಖ್ಯೆಯು ಹೆಚ್ಚಾಗುತ್ತಿದ್ದು,ಜಿಲ್ಲೆಯ ಜೇವನದಿನೇತ್ರಾವತಿ ನದಿತೀರದ ಅಲ್ಲಲ್ಲಿ ಗೋವಿನ ರುಂಡ,ತ್ಯಾಜ್ಯಗಳು ಪತ್ತೆಯಾಗುತ್ತಿದ್ದು,ನೇತ್ರಾವತಿ ನೀರಿನ ಜೊತೆಯಲ್ಲಿ ಗೋರಕ್ತವು ಹರಿದು ಮಲೀನವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಗೋವಿನ ಸಂರಕ್ಷಣೆಗಾಗಿ ಹಿಂದೂ ಸಮಾಜ ಕಟಿಬದ್ದರಾಗಬೇಕು ಎಂದರು.
ರಾಧಸುರಭೀ ಗೋ ಮಂದಿರದ ಸಂಚಾಲಕ ಭಕ್ತಿಭೂಷಣದಾಸ್ ಸ್ವಾಮೀಜಿ ಅವರು ಮಾತನಾಡಿ,ನಂದಿಯ ನಾಲ್ಕು ಕಾಲುಗಳು ಧರ್ಮದ ನಾಲ್ಕು ಕಂಬಗಳಿದ್ದಂತೆ ನಂದಿಯು ಧರ್ಮದ ಪ್ರತೀಕವಾಗಿದ್ದು, ಗೋ ಉತ್ಪನ್ನಗಳನ್ನು ಬಳಸಿಕೊಂಡು ದೇಶಿಯ ತಳಿಗಳ ಸಂರಕ್ಷಣೆ ಮಾಡುವ ಮೂಲಕ ಗೋಮಾತೆಯನ್ನು ನಿತ್ಯ ನಿರಂತರ ಪೂಜಿಸೋಣ ಎಂದರು
ಶ್ರೀ ರಕ್ತೇಶ್ವರೀ ದೇವಸ್ಥಾನದ ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಸಂಜೀವಪೂಜಾರಿ ಸಭಾಧ್ಯಕ್ಷತೆ ವಹಿಸಿದ್ದರು.ಶ್ರೀರಕ್ತೇಶ್ವರೀ ದೇವಳದ ಆಡಳಿತ ಸಮಿತಿ ಅಧ್ಯಕ್ಷ ಬಿ.ವಿಶ್ವನಾಥ,ಬಂಟ್ವಾಳ ತಾಲೂಕು ಆರ್ ಎಸ್ ಎಸ್ ಸಂಘಚಾಲಕ ಡಾ.ಬಾಲಕೃಷ್ಣ,ಗೋಸೇವಾಗತಿವಿಧಿಮಂಗಳೂರು ಸಂಚಾಲಕಗಂಗಾಧರ್,ಹಿ.ಜಾ.ವೇ.ಯ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರು ವೇದಿಕೆಯಲ್ಲಿದ್ದರು.
ರಥಯಾತ್ರೆಯ ಬಿ.ಸಿ.ರೋಡು ಸಮಿತಿ ಸಂಚಾಲಕ ರಾಮದಾಸ ಬಂಟ್ವಾಳ ಸ್ವಾಗತಿಸಿದರು.ನಾಗೇಶ್ ವಂದಿಸಿದರು.ಸುಜಿತ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.ಇದೇವೇಳೆ ನಂದಿರಥಯಾತ್ರೆಗೆ ಸಂಬಂಧಿಸಿದ ಸಂಗೀತ ರಚಿಸಿದ ಭಾಸ್ಕರ ಬಿ.ಸಿ.ರೋಡು ಅವರನ್ನು ಅಭಿನಂದಿಸಲಾಯಿತು.ಜಗದೀಶ್ ಹೊಳ್ಳ ವಿಷ್ಣು ಸಹಸ್ರನಾಮ ಪಠಿಸಿದರು.
ಇದಕ್ಕು ಮೊದಲು ಬಿ.ಸಿ.ರೋಡಿನ ಕೈಕಂಬದಿಂದ ಶ್ರೀರಕ್ತೇಶ್ವರೀ ವಠಾರದವರೆಗೆ ನಂದಿರಥಯಾತ್ರೆಯು ಸಾಗಿಬಂತು.