ಮಂಗಳೂರು: ಮಂಗಳೂರಿನ ಖಾಸಗಿ ರೆಸಾರ್ಟ್ ಈಜುಕೊಳದಲ್ಲಿ ಬಿದ್ದು ಪ್ರವಾಸಿಗ ಸಾವು

ಮಂಗಳೂರು: ಈಜುಕೊಳದಲ್ಲಿ ಬಿದ್ದು ಪ್ರವಾಸಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಖಾಸಗಿ ರೆಸಾರ್ಟ್ ನಡೆದಿದೆ. ಮಡಿಕೇರಿ ಕುಶಾಲನಗರದ ಮೂಲದ ಪ್ರವಾಸಿ ದುರ್ಮರಣ. ಈಜಲೆಂದು ಈಜುಕೊಳಕ್ಕೆ ಹಾರಿದ ಸಂದರ್ಭ ತಲೆ ಟ್ವಿಸ್ಟ್ ಆಗಿ ಈಜುಕೊಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ದೃಶ್ಯ ರೆಸಾರ್ಟ್ ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.
ಕುಶಾಲನಗರದ ಮೊಬೈಲ್ ಗ್ಯಾಲರಿ ಶಾಪ್ ನ ಮಾಲೀಕ ನಿಶಾಂತ್ ಎಂದು ಹೇಳಲಾಗಿದೆ. ನಿಶಾಂತ್ ಪ್ರವಾಸಕೆಂದು ಮಂಗಳೂರಿಗೆ ಸ್ನೇಹಿತನ ಜೊತೆ ತೆರಳಿದ್ದರು. ನಿಶಾಂತ್ ತಂಗಿದ್ದ ರೆಸಾರ್ಟ್ನ ಈಜುಕೊಳದಲ್ಲಿ ಈಜಲು ಇಳಿದಿದ್ದ.
ನೀರಿಗೆ ಹಾರಿದ ವೇಳೆ ಕೈ ಕಾಲು ಆಡಿಸದ ಹಿನ್ನೆಲೆ ಸ್ನೇಹಿತರು ಎತ್ತುವ ಮೊದಲೇ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.