ಬಂಟ್ವಾಳ: ರಾಜಕೀಯ ಗುದ್ದಾಟ: ಶಂಭೂರು ಕಲ್ಲಮಾಳಿಗೆ ಮುಂಡಿತ್ತಾಯ ವೈದ್ಯನಾಥ ನೇಮೋತ್ಸವ ಸ್ಥಗಿತ

ಬಂಟ್ವಾಳ: ರಾಜಕೀಯ ಗುದ್ದಾಟಕ್ಕೆ ತುಳುನಾಡಿನ ಕಾರ್ಣಿಕ ದೈವದ ನೇಮೋತ್ಸವವೇ ಸ್ಥಗಿತಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಶಂಭೂರಿನಲ್ಲಿ ನಡೆದಿದೆ. ಅದ್ದೂರಿಯಾಗಿ ನಡೆಯಬೇಕಿದ್ದ ನೇಮೋತ್ಸವವನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ರಾ ? ಎಂಬ ಪ್ರಶ್ನೆ ಮೂಡಿದೆ. ಶಂಭೂರ ಕಲ್ಲಮಾಳಿಗೆ ಮುಂಡಿತ್ತಾಯ ವೈದ್ಯನಾಥ ದೈವಸ್ಥಾನದ ನೇಮೋತ್ಸವ ಸ್ಥಗಿತಗೊಂಡಿದೆ. ಮಾ.9ರಿಂದ ಮಾ.11ರವರೆಗೆ ನಡೆಯಬೇಕಿದ್ದ ವಾರ್ಷಿಕ ನೇಮೋತ್ಸವ ನಡೆದಿಲ್ಲ.
ಗ್ರಾಮಸ್ಥರು ಮತ್ತು ಮನೆತನಗಳ ನಡುವಿನ ತಿಕ್ಕಾಟದಿಂದ ಈ ನೇಮೋತ್ಸವ ಸ್ಥಗಿತಗೊಂಡಿದೆ ಎಂದು ಹೇಳಲಾಗಿದೆ. ಎರಡೂ ಕಡೆಗಳಲ್ಲಿ ರಾಜಕೀಯ ಪ್ರಭಾವದ ಆಟಕ್ಕೆ ಕಾರ್ಣಿಕ ದೈವದ ಆಚರಣೆಗೆ ಅಡ್ಡಿಯಾಗಿದೆ. ಗ್ರಾಮಸ್ಥರು ಹಾಗೂ ಸರ್ಕಾರ ನೇಮಿಸಿದ ವ್ಯವಸ್ಥಾಪನ ಸಮಿತಿಯಿಂದ ವಾರ್ಷಿಕ ನೇಮೋತ್ಸವ ಆಯೋಜನೆ ಮಾಡಿತ್ತು. ಇಡೀ ಗ್ರಾಮವನ್ನೇ ಶೃಂಗರಿಸಿ ಅದ್ದೂರಿ ನೇಮೋತ್ಸವಕ್ಕೆ ತಯಾರಿ ನಡೆಸಲಾಗಿತ್ತು. ಇನ್ನೇನು ದೈವದ ಗಗ್ಗರ ಸೇವೆ ನಡೆಬೇಕಿತ್ತು ಎನ್ನುವಷ್ಟರಲ್ಲಿ ಸಂಘರ್ಷ ಶುರುವಾಗಿದೆ. ದೈವ ಕೂಡಿಯಡಿಯಲ್ಲಿ (ದೈವದ ಆವರಣದಲ್ಲಿ) ಗ್ರಾಮಸ್ಥರು ಹಾಗೂ ಗುತ್ತು ಮನೆತನದ ನಡುವೆ ತೀವ್ರ ವಾಗ್ವಾದ ನಡೆದಿದೆ.
ಧಾರ್ಮಿಕ ದತ್ತಿ ದೈವಸ್ಥಾನವಾದ ಕಾರಣ ನೇಮೋತ್ಸವದ ಹೊಣೆ ಹೊತ್ತಿದ್ದ ವ್ಯವಸ್ಥಾಪನಾ ಸಮಿತಿ. ಆದರೆ ದೈವದ ಗುತ್ತಿನ ಮನೆಯವರಿಂದ ದೈವ ನೇಮಕ್ಕೆ ಅಡ್ಡಿ ಮಾಡಲಾಗಿದೆ ಎಂದು ಹೇಳಿದ್ದಾರೆ. ರಾಜಕೀಯ ಪ್ರಭಾವ ಬಳಸಿ ದೈವದ ನೇಮೋತ್ಸವ ತಡೆಯಾಗಿದೆ ಎಂದು ಆರೋಪಿಸಲಾಗಿದೆ. ಪೊಲೀಸರು ಮತ್ತು ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ದೈವದ ನೇಮೋತ್ಸವವೇ ಸ್ಥಗಿತಗೊಳಿಸಿದ್ದಾರೆ. ಇದೀಗ ನೇಮೋತ್ಸವಕ್ಕೆ ತಡೆ ತಂದಿದ್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೈವದ ನೆಲದಲ್ಲಿ ರಾಜಕೀಯ ದೊಂಬಾರಟ ನಡೆದಿದೆ. ಬಿಜೆಪಿ -ಕಾಂಗ್ರೆಸ್ ಪ್ರತಿಷ್ಠೆ ದೈವಕ್ಕೂ ತಟ್ಟಿದೆ.