ಮೈಸೂರಿನಲ್ಲಿ ಲವ್ ಜಿಹಾದ್ ಶಂಕೆ? ರಿಜಿಸ್ಟರ್ ಕಚೇರಿ ತಪ್ಪು ಮಾಹಿತಿ ಕೊಟ್ಟ ಅನ್ಯಕೋಮಿನ ಯುವಕ, ಯುವತಿ

ಮೈಸೂರಿನಲ್ಲಿ ಲವ್ ಜಿಹಾದ್ ವಾಸನೆ ಬರುತ್ತಿದೆ. ಅಂತಹದೊಂದು ಅನುಮಾನವನ್ನು ಇತ್ತೀಚಿಗೆ ಮ್ಯಾರೇಜ್ ರಿಜಿಸ್ಟರ್ ಕಚೇರಿಯಲ್ಲಿ ಅಂಟಿಸಿದ್ದ ನೋಟಿಸ್ ಕಾರಣವಾಗಿದೆ.ವಯಸ್ಸಿಗೆ ಬಂದ ಮುಸ್ಲಿಂ ಯುವಕ, ಹಿಂದೂ ಯುವತಿ ಮಾಡಿರುವ ಎಡವಟ್ಟಿನಿಂದ ಪ್ರಕರಣ ಸಾಕಷ್ಟು ಚರ್ಚೆಗೆ, ಘರ್ಷಣೆಕ್ಕೆ ಕಾರಣವಾಗಿದೆ.ಮುಸ್ಲಿಂ ಯುವಕ, ಹಿಂದೂ ಯುವತಿ ಮದುವೆಯಾಗಲು ಪ್ರಮಾಣ ಪತ್ರಗಾಗಿ ಸುಳ್ಳು ಮಾಹಿತಿ ನೀಡಿದ್ದಾರೆ. ಯಾರದೋ ಮನೆಯ ವಿಳಾಸವನ್ನು ತನ್ನ ಮನೆಯ ವಿಳಾಸ ಎಂದು ಹೇಳಿ ಹಿಂದೂ ಯುವತಿಯನ್ನ ಮದುವೆಯಾಗಲು ಮುಸ್ಲಿಂ ಯುವಕ ಮುಂದಾಗಿದ್ದಾನೆ. ಬೆಂಗಳೂರಿನ ಯುವಕ ಸಲ್ಮಾನ್ ಹಾಗೂ ಹಾಸನ ಮೂಲದ ಯುವತಿ ಪೂರ್ಣಿಮಾ ಇಬ್ಬರ ವಿಳಾಸವು ಬೇರೆಯಾಗಿದ್ದು, ವಿಷಯ ತಿಳಿದ ಮನೆ ಮಾಲೀಕ ಈಗ ಕಂಗಾಲಾಗಿದ್ದಾರೆ.
ಮನೆ ಮಾಲೀಕ ರವೀಂದ್ರ ಅವರು ಸಿಪಿಐ(ಎಂ) ಕಚೇರಿಗೆ ಮನೆಯ ಕಟ್ಟಡ ಬಾಡಿಗೆ ನೀಡಿದ್ದಾರೆ. ಇಲ್ಲಿ ಕಚೇರಿ ಕೆಲಸಗಳು ನಡೆಯುತ್ತವೆ. ಮೈಸೂರಿನ ಚಾಮರಾಜ ಮೊಹಲ್ಲಾದ ಮಡಿವಾಳ ಬೀದಿಯಲ್ಲಿರುವ ಮನೆ ನಂ130 ರ ಈ ಮನೆಯನ್ನೇ ಸಲ್ಮಾನ್ ತನ್ನ ಮನೆ ಎಂದು ಮ್ಯಾರೇಜ್ ರಿಜಿಸ್ಟರ್ ಮಾಡಿಸಲು ನೀಡಿದ್ದಾನೆ. ಇದಕ್ಕೆ ಮನೆ ಮಾಲೀಕ ರವೀಂದ್ರ ತಕರಾರು ಸಲ್ಲಿಸಿದ್ದಾರೆ.ಇಡೀ ಬೀದಿಯಲ್ಲಿ ಒಂದು ಮುಸ್ಲಿಂ ಕುಟುಂಬಗಳು ವಾಸ ಇಲ್ಲ. ಆದರೆ ರವೀಂದ್ರ ಅವರ ಮನೆಯನ್ನೇ ತಾನು ವಾಸ ಇದ್ದೇನೆ ಎಂದು ಸಬ್ ರಿಜಿಸ್ಟ್ರಾರ್ಗೆ ಸಲ್ಲಿಕೆ ಮಾಡಿರುವ ಎಂ.ಸಲ್ಮಾನ್ ವಿರುದ್ಧ ಲವ್ ಜಿಹಾದ್‌ನ ಅನುಮಾನ ವ್ಯಕ್ತವಾಗಿದೆ.
ವಯಸ್ಸಿಗೆ ಬಂದ ಯುವಕ, ಯುವತಿ ಮದುವೆಯಾಗಲು ನಮ್ಮ ಅಭ್ಯಂತರವಿಲ್ಲ. ಆದರೆ ವಿಳಾಸಗಳನೇ ತಪ್ಪಾಗಿ ಕೊಟ್ಟು ಮದುವೆಯಾಗುತ್ತಿರುವುದಕ್ಕೆ ಅನುಮಾನಗಳು ಹುಟ್ಟಿಕೊಂಡಿವೆ. ಇದರ ಹಿಂದೆ ಎಸ್ಡಿಪಿಐ ಪಿಎಫ್ಐ ಸಂಘಟನೆಗಳ ಕೈವಾಡದ ಶಂಕೆ ವ್ಯಕ್ತವಾಗಿದೆ. ಎಸ್ಎಫ್ಐ ಸಂಘಟನೆಗೆ ಹಿಂದೂ ಮಕ್ಕಳನ್ನ ಸೇರಿಸುವ ಮುನ್ನ ಪೋಷಕರು ಎಚ್ಚರವಹಿಸಬೇಕು. ಒಮ್ಮೆ ಇಲ್ಲಿಗೆ ಸೇರಿದವರು ಈ ರೀತಿಯಾಗಿ ದಾರಿ ತಪ್ಪುತ್ತಿರುವುದು ಗೊತ್ತಾಗುತ್ತಿದೆ ಎಂದು ಹಿಂದೂ ಮುಖಂಡ ಪ್ರೇಮ್‌ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.