ಬಂಟ್ವಾಳ: 13 ದಿನದ ಬಳಿಕ ನಾಪತ್ತೆಯಾದ ದಿಗಂತ್ ಸುಳಿವು ಸಿಕ್ಕಿದೆ.

13 ದಿನದ ಬಳಿಕ ನಾಪತ್ತೆಯಾದ ದಿಗಂತ್ ಸುಳಿವು ಸಿಕ್ಕಿದೆ. ಬಂಟ್ವಾಳದಿಂದ ನಾಪತ್ತೆಯಾದ ದಿಗಂತ್ ಪತ್ತೆಯಾಗಿದ್ದಾನೆ. ಇದೀಗ ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಫೆ. 25ರಂದು ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ದಿಗಂತ್ ಬಳಿಕ ಮನೆಗೆ ಬಂದಿಲ್ಲ.
ರೈಲ್ವೇ ಹಳಿಯಲ್ಲಿ ಆತನ ಚಪ್ಪಲಿಗಳು, ಮೊಬೈಲ್ ಪತ್ತೆಯಾಗಿ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿತ್ತು. ಇಷ್ಟು ದಿನವಾದರೂ ಪೋಲಿಸರು ಯಾವುದು ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಆರೋಪ ಕೂಡ ವ್ಯಕ್ತವಾಗಿತ್ತು. ಈ ಬಗ್ಗೆ ಹಿಂದೂ ಸಂಘಟನೆಗಳು ಪ್ರತಿಭಟನೆಯನ್ನು ಕೂಡ ನಡೆಸಿದ್ದರು. ಇದೀಗ ಆತ ಕರಾವಳಿ ಭಾಗದಲ್ಲಿ ಪತ್ತೆಯಾಗಿದ್ದಾನೆ ಎನ್ನಲಾಗಿದ್ದು, ಇನ್ನು ಎಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿಲ್ಲ.