Published On: Thu, Mar 6th, 2025

ಬೆಂಗಳೂರು: ಯುವತಿಯೊಂದಿಗೆ ಲಿವಿಂಗ್ ಟುಗೆದರ್‌ನಲ್ಲಿದ್ದ ಯುವಕ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ

ಬೆಂಗಳೂರಿನ ಹರಳೂರು ಕೂಡ್ಲು ರಸ್ತೆಯ ಎಸ್ಎನ್ಎನ್ ರಾಜ್ ಎಟರ್ನಿಯ ಅಪಾರ್ಟ್ಮೆಂಟ್‌ನಲ್ಲಿ ಯುವತಿಯೊಬ್ಬಳ ಜೊತೆ ಲಿವಿಂಗ್ ಟುಗೆದರ್‌ನಲ್ಲಿದ್ದ ಯುವಕನೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾರ್ಚ್ 4 ರಂದು ಮುಂಜಾನೆ 5 ಗಂಟೆಗೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತಪಟ್ಟ ಯುವಕನನ್ನು ಉತ್ತರ ಪ್ರದೇಶ ಮೂಲದ ಮಾಯಾಂಕ್ ರಜನಿ ಎಂದು ಗುರುತಿಸಲಾಗಿದೆ.

ಮಯಾಂಕ್ ರಜನಿ ಅಪಾರ್ಟ್ಮೆಂಟ್​ನ 12ನೇ ಮಾಡಿಂದ ಕೆಳಗೆ ಹಾರಿದ್ದಾನೆ. ಅದಾದ ಸ್ವಲ್ಪ ಹೊತ್ತಿನ ಬಳಿಕ ಸೆಕ್ಯೂರಿಟಿ ಗಾರ್ಡ್​ಗೆ ಯುವಕನ ಮೃತದೇಹ ಕಾಣಿಸಿದೆ. ಗಾಬರಿಗೊಂಡ ಆತ 12ನೇ ಮಹಡಿಯಲ್ಲಿರುವ ಯುವಕನ ಕೊಠಡಿಗೆ ತೆರಳಿ ಬಾಗಿಲು ಬಡಿದಿದ್ದಾನೆ. ಆಗ ತಾನೆ ಎದ್ದು ಬಂದ ಯುವತಿ, ಸೆಕ್ಯೂರಿಟಿ ಗಾರ್ಡ್ ಹೇಳಿದ ವಿಚಾರ ತಿಳಿದು ಗಾಬರಿಗೊಂಡಿದ್ದಾಳೆ. ಉತ್ತರ ಪ್ರದೇಶದ ಮಯಾಂಕ್ 4 ವರ್ಷಗಳಿಂದ ಬೆಂಗಳೂರಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ಫ್ಲಾಟ್ ಬಾಡಿಗೆಗೆ ಪಡೆದು ವಾಸ ಮಾಡುತ್ತಿದ್ದ. ಕಳೆದ ಎರಡು ವರ್ಷಗಳಿಂದ ಯುವತಿ ಜೊತೆ ಲಿವ್ ಇನ್ ರಿಲೇಷನ್​ಶಿಪ್​​ನಲ್ಲಿದ್ದ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter