ಅಕ್ಕಿ ಕಾಳಿನ ಅಳತೆಯ ಕಲ್ಲಿನಲ್ಲಿ ಶಿವಲಿಂಗ ಕೆತ್ತಿದ್ದ ಉತ್ತರ ಕರ್ನಾಟಕದ ಖ್ಯಾತ ಶಿಲ್ಪಿ

ದೇಶದೆಲ್ಲೆಡೆ ಮಹಾಶಿವರಾತ್ರಿ ಸಂಭ್ರಮ ಕಲೆಗಟ್ಟಿದೆ. ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದೆ. ಇದರ ನಡುವೆ ಕೆಲವೊಂದು ಶಿಲ್ಷಿಗಳಿಂದ ಶಿವಲಿಂಗ ವಿಶೇಷ ಆಕೃತಿಗಳನ್ನು ಕೆತ್ತಲಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಉತ್ತರ ಕರ್ನಾಟಕದ ಖ್ಯಾತ ಶಿಲ್ಪಿಯಾಗಿರುವ ಪ್ರಕಾಶ ಅವರು ಅಕ್ಕಿ ಕಾಳಿನ ಅಳತೆಯ ಕಲ್ಲಿನಲ್ಲಿ ಶಿವಲಿಂಗವನ್ನು ಕೇವಲ ಒಂದೇ ತಾಸಿನಲ್ಲಿ ಕೆತ್ತಿದ್ದಾರೆ. ಶಿಲ್ಪಿ ಪ್ರಕಾಶ್ ಈ ಹಿಂದೆ ಅಕ್ಕಿ ಕಾಳಿನಲ್ಲಿ ಗಾಂಧಿ, ಕಲ್ಲಿನ ಕೊರಳು ಕೆತ್ತನೆ ಮಾಡಿದ್ದರು. ಶಿಲ್ಪಿ ಪ್ರಕಾಶ್ ವಿವಿಧ ಮೂರ್ತಿಗಳನ್ನು ಶಿಲೆ, ಲೋಹಗಳಿಂದ ಕೆತ್ತನೆ ಮಾಡಿದ್ದಾರೆ.