ಮಂಗಾಜೆ ಶ್ರೀ ಕೋರ್ದಬ್ಬು ತನ್ನಿಮಾನಿಗ ದೈವದ ನೇಮೋತ್ಸವ
ಪೊಳಲಿ: ಮಂಗಾಜೆ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಫೆ.೨೨ರಂದು ಶನಿವಾರ ಶ್ರೀ ಕೋರ್ದಬ್ಬು ಹಾಗೂ ತನ್ನಿಮಾನಿಗ ದೈವಗಳ ನೇಮೋತ್ಸವ ನಡೆಯಿತು.

ಫೆ.೨೩ರಂದು ಭಾನುವಾರ ಗುಳಿಗ-ಪಂಜುರ್ಲಿ ಹಾಗೂ ರಾಹುಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿಕೋರ್ದಬ್ಬು ದೈವಸ್ಥಾನದ ಜೀಣೋಧ್ದಾರ ಸಮಿತಿ ಅಧ್ಯಕ್ಷ ಸುಕೇಶ್ ಚೌಟ ಬಡಕಬೈಲು, ಗುತ್ತಿನವರಾದ ಅಶೀತ್ ಶೆಟ್ಟಿ ,ಕೋರ್ದಬ್ಬು ಸೇವಾಸಮಿತಿ ಅಧ್ಯಕ್ಷ ಚಂದ್ರಹಾಸ (ಚರಣ್) ಮಂಗಾಜೆ, ಕಾರ್ಯದರ್ಶಿ ಅಶೋಕ್ ಬಡಕಬೈಲ್,ಪ್ರಮುಖರಾದ ಚಂದ್ರಶೇಖರ ಶೆಟ್ಟಿ, ದೇವದಾಸ್ ಅಯೆರೆಮಾರ್,ನಾರಾಯಣ ಪೂಜಾರಿ ಅಯೆರೆಮಾರ್ ಶಶಿಧರ ಭಂಡಾರದ ಮೂಲ್ಯ,ಚಂದ್ರಶೇಖರ ಗುರಿಕಾರ ಬೆಂಜನಪದವು ಮತ್ತಿತರರು ಉಪಸ್ಥಿತರಿದ್ದರು.