ಮಂಗಳೂರು: ಸರ್ಕಾರದಿಂದ ಎಡವಟ್ಟು, ರಂಗೋತ್ಸವ ವೇದಿಕೆಯಲ್ಲಿ ದೈವ ನರ್ತನ, ಕಿಡಿಕಾರಿದ ದೈವರಾಧಕರು

ಮಂಗಳೂರು: ರಾಜ್ಯ ಶಿಕ್ಷಣ ಇಲಾಖೆಯಿಂದ ಎಡವಟ್ಟೊಂದನ್ನು ಮಾಡಿಕೊಂಡಿದೆ. ದೈವರಾಧನೆಗೆ ಅವಮಾನ ಮಾಡಿದೆ ಎಂದು ಹೇಳಲಾಗಿದೆ. ಶಾಲೆಗಳಲ್ಲಿ ರಂಗೋತ್ಸವ ಎಂಬ ಕಾರ್ಯಕ್ರಮದ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಮನರಂಜನಾ ಕಾರ್ಯಕ್ರಮದ ಪಟ್ಟಿಯಲ್ಲಿ ಕರಾವಳಿಯ ದೈವರಾಧನೆಯನ್ನು ಸೇರಿಸಿಕೊಂಡು ವಿವಾದ ಸೃಷ್ಟಿಸಿಕೊಂಡಿದೆ. ದೈವಗಳು ವೇದಿಕೆಯ ಮೇಲೆ ನರ್ತನ ಮಾಡಿ ತೋರಿಸುವಂತಹ ವಸ್ತುವಲ್ಲ ಎಂದು ದೈವರಾಧಕರು ಸರ್ಕಾರದ ವಿರುದ್ದ ಕಿಡಿಕಾರಿಕಾರಿದ್ದಾರೆ.
ಇತಿಹಾಸ ಹೊಂದಿರುವ ತುಳುನಾಡಿನ ಶ್ರದ್ದಾಭಕ್ತಿಯ ಧಾರ್ಮಿಕ ಆಚರಣೆ ದೈವರಾಧನೆಗೆ ಒಂದಿಲ್ಲೊಂದು ಅಪಚಾರವಾಗುತ್ತಿದೆ. ಅದರಲ್ಲೂ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಬಂದ ಬಳಿಕ ಬೀದಿ ಬೀದಿಗಳಲ್ಲಿ ದೈವದ ವೇಷ ಭೂಷಣ ಹಾಕಿ ಅಣಕು ಪ್ರದರ್ಶನ ಮಾಡಲಾಗುತ್ತಿದೆ. ಇದರ ವಿರುದ್ದ ಕ್ರಮ ಕೈಗೊಳ್ಳಲು ದೈವರಾಧಕರು ಸರ್ಕಾರಕ್ಕೆ, ಆಡಳಿತ ವ್ಯವಸ್ಥೆಗೆ ಒತ್ತಾಯ ಮಾಡಿಕೊಂಡೆ ಬಂದಿದ್ದಾರೆ. ಆದರೆ ಇದೀಗ ಆಳುವ ಸರ್ಕಾರವೇ ದೈವರಾಧನೆಗೆ ಅಪಚಾರ ಎಸಗಿದೆ ಎಂದು ದೈವರಾಧಕರು ಆರೋಪಿಸಿದ್ದಾರೆ.