ಬಂಟ್ವಾಳ: ಮೂಡೊಟ್ಟು ತಾವು ಗರಡಿ ಕಾಲಾವಧಿ ನೇಮೋತ್ಸವ

ಬಂಟ್ವಾಳ: ಮಾಲಾಡಿ ಗ್ರಾಮದ ಮೂಡೊಟ್ಟು ತಾವು ಗರಡಿ, ಶ್ರೀ ರಾಜನ್ ದೈವ ಕೊಡಮಣಿತ್ತಾಯ, ಕಲ್ಕುಡ-ಕಲ್ಲುರ್ಟಿ ದೈವಗಳು ಹಾಗೂ ಶ್ರೀ ಬ್ರಹ್ಮಬದರ್ಕಳ ಮತ್ತು ಮಾಯಾಂದಾಲ್ ದೈವಗಳ ಕ್ಷೇತ್ರ ಇದರ ಕಾಲಾವಧಿ ನೇಮೋತ್ಸವ ನಡೆಯಿತು.ಅಜಿಲ ಸೀಮೆಯ ತಿಮ್ಮಣ್ಣರಸರಾದ ಡಾ.ಪದ್ಮ ಪ್ರಸಾದ ಅಜಿಲ ಅವರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಿತು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬೆಸ್ಟ್ ಫೌಂಡೇಶನ್ ಟ್ರಸ್ಟ್ಟ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಮತ್ತಿತರ ಗಣ್ಯರು ಭಾಗವಹಿಸಿದ್ದರು. ಕ್ಷೇತ್ರದ ಗುರಿಕಾರ ಮೋಹನಂದ ಪೂಜಾರಿ, ಗಡಿಕಾರ ವಿಜಯ ಪೂಜಾ, ಧರ್ಮದರ್ಶಿ ಪ್ರಶಾಂತ್ ಪುಂಜಾಲಕಟ್ಟೆ ಹಾಗೂ ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.