ಕ್ಯಾಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಚುನಾವಣೆಯಲ್ಲಿ 11 ಅಭ್ಯರ್ಥಿಗಳು ಗೆಲುವು

ಬಂಟ್ವಾಳ :ಕ್ಯಾಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ನಿ.) ಇದರ ಆಡಳಿತ ಮಂಡಳಿಯ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ 14 ಅಭ್ಯರ್ಥಿಗಳಲ್ಲಿ 11 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.ಬಿ.ಸಿ. ರೋಡ್ ನ ಲಯನ್ಸ್ ಕ್ಲಬ್ ನಲ್ಲಿ ಮತದಾನ ಪ್ರಕ್ರಿಯೆ ನಡೆದಿದ್ದು, ಮಂಗಳೂರು ಸಹಕಾರಿ ಸಂಘಗಳ ಉಪ ನಿಬಂಧಕರ ಕಚೇರಿಯ ಬಂಟ್ವಾಳ ಸಹಕಾರಿ ಅಭಿವೃದ್ಧಿ ಅಧಿಕಾರಿ ಡಾ. ಜ್ಯೋತಿ ಡಿ. ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.
ಸೊಸೈಟಿಯ ಸಿಇಒ ಸೆಲಿನ್ ಗ್ರೇಸಿ ಡಿ’ಸೋಜ ಹಾಗೂ ಸಿಬ್ಬಂದಿಗಳು ಸಹಕರಿಸಿದರು.ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಂಘದ ಹಾಲಿ ಅಧ್ಯಕ್ಷ ಜೀವನ್ ಲೋಯ್ಡ್ ಪಿಂಟೋ, ಉಪಾಧ್ಯಕ್ಷ ವಲೇರಿಯನ್ ಬರೆಟ್ರೊ, ಅನಿಲ್ ಹೆರಾಲ್ಡ್ ಫ್ರಾಂಕ್, ಲಾದ್ರು ಮಿನೇಜಸ್, ರೊನಾಲ್ಡ್ ವಿಜಯ್ ಫೆರ್ನಾಂಡಿಸ್, ಗ್ಲೋರಿಯಾ ಪ್ರೀಮಾ ಕುಟಿನ್ಯೂ ವಿನ್ಸೆಂಟ್ ಕ್ಲಾಡಿ ಕಾರ್ಲೋ, ಲಾರೆನ್ಸ್ ಕ್ಲಿಫರ್ಡ್ ಡಿಸೋಜ, ಫ್ರಾನ್ಸಿಸ್ ಮೆಂಡೋನ್ಸಾ ಹಿಲಾರಿ ಕ್ರಾಸ್ತ, ಹೂಬರ್ಟ್ ಲೋಬೊ ಜಯಗಳಿಸಿದ್ದಾರೆ.
ಮಹಿಳಾ ಕ್ಷೇತ್ರದಿಂದಅನಿತಾ ನೊರೊನ್ಹಾ ಮತ್ತು ಬೆನೆಡಿಕ್ಟಾ ಸಲ್ದಾನ್ಹಾ,ಹಿಂ.ವರ್ಗ ‘ಬಿ’ ಕ್ಷೇತ್ರದಿಂದ ವಿಶಾಲ್ ಡಿಸೋಜ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಹಿ.ವರ್ಗ ಬಿ ಕ್ಷೇತ್ರದಿಂದ ಒಂದು ಸ್ಥಾನಕ್ಕೆ ಮಾತ್ರ ನಾಮಪತ್ರ ಸಲ್ಲಿಕೆಯಾಗಿದ್ದು, ಇನ್ನೊಂದು ಸ್ಥಾನ ಖಾಲಿಯಾಗಿದೆ.