ಹಾವೇರಿ: ನಾಡ ಬಾಂಬ್ ತಿಂದು ಎಮ್ಮೆ ಬಾಯಿ ಛಿದ್ರ, ಮಾಲೀಕನ ಮುಂದೆ ಪ್ರಾಣವೇ ಹೋಯಿತು

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹೊಸಕೊಪ್ಪದಲ್ಲಿ ಕಾಡುಹಂದಿ ಬೇಟೆಯಾಡಲು ಇಟ್ಟಿದ್ದ ನಾಡ ಬಾಂಬ್ ತಿಂದು ಎಮ್ಮೆ ತೀವ್ರವಾಗಿ ಗಾಯಗೊಂಡಿದ್ದು, ನರಳಿ ನರಳಿ ಪ್ರಾಣ ಬಿಟ್ಟಿದೆ. ರೈತ ಬಾಷಾಸಾಬ್ ಬಂಕಾಪುರಗೆ ಸೇರಿದ ಎಮ್ಮೆ ಹುಲ್ಲು ಮೇಯುತ್ತಿದ್ದಾಗ ನಾಡಬಾಂಬ್ ತಿಂದಿದೆ. ಈ ವೇಳೆ ನಾಡಬಾಂಬ್ ಎಮ್ಮೆ ಬಾಯಲ್ಲೇ ಸ್ಫೋಟಗೊಂಡಿದೆ. ಇದರಿಂದ ಎಮ್ಮೆ ಬಾಯಿ ಛಿದ್ರ ಛಿದ್ರವಾಗಿದ್ದು, ಬಳಿಕ ನರಳಿ ನರಳಿ ಸಾವನ್ನಪ್ಪಿದೆ.