Published On: Mon, Feb 3rd, 2025

ಪಡುಪೆರಾರ ಹೆದ್ದಾರಿಯಲ್ಲಿ

ಬೃಹತ್ ಸ್ವಚ್ಛತಾ ಕಾರ್ಯ

ಕೈಕಂಬ : ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಜ್ಪೆ-ಗುರುಪುರ ಕೈಕಂಬ ರಾಜ್ಯ ಹೆದ್ದಾರಿಯ ಪುಚ್ಚಳ, ಅಡ್ಕಬಾರೆ, ಪೆರಾರ ಮತ್ತಿತರ ಕಡೆಯಲ್ಲಿ ಪಂಚಾಯತ್ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಪಿಡಿಒ ನೇತೃತ್ವದ ಸ್ವಯಂ-ಸೇವಕರು ಫೆ. ೨ರಂದು ಹೆದ್ದಾರಿ ಬದಿಯಲ್ಲಿ ಬೃಹತ್ ಸ್ವಚ್ಚತಾ ಅಭಿಯಾನ ನಡೆಸಿದರು.

ಪಂಚಾಯತ್ ಕಚೇರಿ ಪಕ್ಕದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ಬದಿಯಿಂದ ಸ್ವಚ್ಛತಾ ಕಾರ್ಯ ಆರಂಭಗೊAಡಿದೆ. ತ್ಯಾಜ್ಯ ಸಂಗ್ರಹಿಸಿ ಸಾಗಿಸಲು ಲಾರಿ ಬಳಸಲಾಗಿದ್ದು, ಮಧ್ಯಾಹ್ನದ ವೇಳೆಗೆ ಸುಮಾರು ನಾಲ್ಕೆÊದು ಲೋಡ್ ತ್ಯಾಜ್ಯ ತೆರವುಗೊಳಿಸಲಾಗಿದೆ. ಸ್ವಯಂ ಮುತುವರ್ಜಿ ವಹಿಸಿದ್ದ ಪಿಡಿಒ ಉಗ್ಗಪ್ಪ ಮೂಲ್ಯ, ಅಧ್ಯಕ್ಷೆ ಮೀನಾಕ್ಷಿ ಮತ್ತು ಉಪಾಧ್ಯಕ್ಷ ಜಯಂತ ಪೂಜಾರಿ ಅವರು ಸ್ವಯಂ ಸೇವಕರ ಜೊತೆಗೂಡಿ ತ್ಯಾಜ್ಯ ವಿಲೇವಾರಿ ಮಾಡಿದರು.

“ತ್ಯಾಜ್ಯ ಎಸೆಯುವವರ ವಿರುದ್ಧ ಕಟ್ಟುನಿಟ್ಟಾದ ಕಾನೂನು ಕ್ರಮ ಕೈಗೊಂಡಿದ್ದೇನೆ. ನನ್ನ ಈವರೆಗಿನ ಅಧಿಕಾರಾವಧಿಯಲ್ಲಿ ಅಧ್ಯಕ್ಷರು ಮತ್ತು ಸದಸ್ಯರ ಸಹಕಾರ ಹಾಗೂ ಸಂಘ-ಸAಸ್ಥೆಗಳ ಬೆಂಬಲದೊAದಿಗೆ ಹಲವು ಬಾರಿ ರಾಜ್ಯ ಬಜ್ಪೆಯಿಂದ ಗುರುಪುರ ಕೈಕಂಬದವರೆಗೆ ರಾಜ್ಯ ಹೆದ್ದಾರಿ ಬದಿಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದ್ದೇನೆ. ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಸಾವಿರದಿಂದ ೫,೦೦೦ ರೂವರೆಗೆ ದಂಡ ಹೇರಿದ್ದೇನೆ. ಈ ಬಾರಿ ತ್ಯಾಜ್ಯ ತೆರವು ಕಾರ್ಯಾಚರಣೆ ವೇಳೆ ತ್ಯಾಜ್ಯ ರಾಶಿಯಲ್ಲಿ ಲಭಿಸಿರುವ ಕೆಲವು ಅಧಿಕೃತ ಕಾಗದಪತ್ರ ಆಧರಿಸಿ, ತಪ್ಪಿತಸ್ಥರ ವಿರುದ್ಧ ದಂಡ ಹೇರಲಾಗುವುದು” ಎಂದು ಪಿಡಿಒ ಉಗ್ಗಪ್ಪ ಮೂಲ್ಯ ತಿಳಿಸಿದರು.

ಸ್ವಚ್ಛತಾ ಅಭಿಯಾನದಲ್ಲಿ ಪಿಡಿಒ ಉಗ್ಗಪ್ಪ ಮೂಲ್ಯ, ಅಧ್ಯಕ್ಷೆ ಮೀನಾಕ್ಷಿ, ಉಪಾಧ್ಯಕ್ಷ ಜಯಂತ ಪೂಜಾರಿ, ಸದಸ್ಯರಾದ ಅಮಿತಾ ಶೆಟ್ಟಿ, ಯಶವಂತ ಪೂಜಾರಿ, ಬಿಜೆಪಿ ಮುಖಂಡರಾದ ಅನಿಲ್, ಅನುರಾಜ್, ಪದ್ಮನಾಭ ನೀರಳಿಕೆ, ಹರಿಪ್ರಸಾದ್, ಪೆರಾರ ಫ್ರೆಂಡ್ಸ್ ಕ್ಲಬ್ ಸದಸ್ಯರು, ಬಿಲ್ ಕಲೆಕ್ಟರ್ ಭೋಜ ನಾಯ್ಕ್, ಗ್ರಂಥಾಲಯ ಮೇಲ್ವಿಚಾರಕ ಭರತ್ ಕುಮಾರ್ ವಿ, ಪಡುಪೆರಾರ ಪಂಚಾಯತ್ ಸ್ವಚ್ಚತಾ ವಾಹಿನಿಯ ಸಿಬ್ಬಂದಿ, ಪಂಚಾಯತ್‌ನ ಸಂಜೀವಿನಿ ಒಕ್ಕೂಟದ ಪ್ರಜ್ಞಾ ಮತ್ತು ಬಳಗದವರು, ಸ್ಥಳೀಯ ಸಂಘ-ಸAಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter