ನೀರುಮಾರ್ಗ: ವಾಜಿಲ್ಲಾಯ-ಧೂಮವತಿ ದೈವದ ಕಾರ್ಣಿಕ: ನೀರುಮಾರ್ಗದ ಪೆದಮಲೆಯಲ್ಲಿ 300 ವರ್ಷಗಳ ಹಳೆಯ ದೈವಸ್ಥಾನ ಪತ್ತೆ

300 ವರ್ಷಗಳ ಹಳೆಯ ದೈವಸ್ಥಾನ ಪತ್ತೆಯಾಗಿದೆ, ಮಣ್ಣಿನಡಿ ಹುದುಗಿ ಹೋಗಿದ್ದ ಈ ದೈವ ಸ್ಥಾನ ಈಗ ಪತ್ತೆಯಾಗಿದೆ. ಇದೀಗ ಈ ದೃಶ್ಯವನ್ನು ಕಂಡು ಗ್ರಾಮಸ್ಥರು ತುಳುನಾಡಿನ ಕಾರ್ಣಿಕ ದೈವದ ಇರುವಿಕೆ ಕಂಡು ಬೆಚ್ಚಿ ಬಿದ್ದಿದ್ದಾರೆ. ದೈವದ ಮುನಿಸಿನಿಂದ ತೊಂದರೆಗೀಡಾದ ಗ್ರಾಮಸ್ಥರಿಗೆ ಪ್ರಶ್ನಾಚಿಂತನೆಯಲ್ಲಿ ಈ ಸುಳಿವು ನೀಡಿದೆ. ಈ ಘಟನೆ ನೀರುಮಾರ್ಗದ ಪೆದಮಲೆ ಗ್ರಾಮದಲ್ಲಿ ನಡೆದಿದೆ. ವಾಜಿಲ್ಲಾಯ-ಧೂಮವತಿ ದೈವದ ಕಾರ್ಣಿಕ ಕಂಡು ಗ್ರಾಮಸ್ಥರಿಗೆ ಅಚ್ಚರಿಗೊಂಡಿದ್ದಾರೆ.
300 ವರ್ಷಗಳಿಂದ ಗ್ರಾಮದ ಜನರ ಅರಿವಿಗೆ ಬಾರದೇ ಮಣ್ಣಿನಡಿ ಹುದುಗಿದ್ದ ಈ ದೈವಸ್ಥಾನ ಈಗ ಪತ್ತೆಯಾಗಿದೆ. ಪಾಳು ಬಿದ್ದು ಪೊದೆಗಳಿಂದ ದಟ್ಟ ನಿರ್ಜನ ಪ್ರದೇಶದಲ್ಲಿ ದೈವಸ್ಥಾನ ಪತ್ತೆಯಾಗಿದೆ. ಇಂತಹ ದೈವಸ್ಥಾನ ಇತ್ತು ಎಂಬ ಬಗ್ಗೆ ಯಾರಿಗೂ ಗೋಚರವೇ ಇರಲಿಲ್ಲ. ಗ್ರಾಮದಲ್ಲಿ ಮನೆಗಳಿಗೆ ನಾಗರಹಾವು ಪ್ರವೇಶ, ಆತ್ಮಹತ್ಯೆ, ಸಾವು-ನೋವು ಹೆಚ್ಚಳವಾಗಿತ್ತು. ನಿರಂತರ ನೆಮ್ಮದಿ ಇಲ್ಲದೇ ಅನೇಕ ಜನರು ಈ ಗ್ರಾಮವನ್ನೇ ತೊರೆದಿದ್ದರು. ಹೀಗಾಗಿ ಪಾಳು ಬಿದ್ದಿದ್ದ ಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು ಮುಂದುದಾಗಿದ್ದರು. ಈ ವೇಳೆ ದೇವಸ್ಥಾನದಲ್ಲಿ ಪ್ರಶ್ನಾಚಿಂತನೆ ವೇಳೆ ವಾಜಿಲ್ಲಾಯ ದೈವಸ್ಥಾನದ ಸುಳಿವು ಪತ್ತೆಯಾಗಿದೆ.
ಉತ್ತರ ದಿಕ್ಕಿನ ನಾಗಬನದ ಬಳಿ ವಾಜಿಲ್ಲಾಯ ದೇವಸ್ಥಾನ ಇರೋ ಸುಳಿವು ಸಿಕ್ಕಿದೆ. ಇಲ್ಲಿ ನೂರಾರು ವರ್ಷಗಳ ಹಿಂದೆ ದೈವಾರಾಧನೆ ನಡೀತಾ ಇತ್ತು. ಹೀಗಾಗಿ ನಾಗಬನದ ಸುತ್ತಲಿನ 50 ಸೆಂಟ್ಸ್ ಜಾಗದಲ್ಲಿ ಗ್ರಾಮಸ್ಥರಿಂದ ಹುಡುಕಾಟ ನಡೆಸಿದ್ದಾರೆ. ಈ ವೇಳೆ ದೈವಸ್ಥಾನದ ಕುರುಹು ಪತ್ತೆಯಾಗಿದೆ. 300 ವರ್ಷಗಳ ಹಿಂದೆ ನೆಲಸಮವಾಗಿದ್ದ ದೈವಸ್ಥಾನ ಎಂದು ಹೇಳಲಾಗಿದೆ. ಸಂಪೂರ್ಣ ಶಿಥಿಲಗೊಂಡ ದೈವಸ್ಥಾನದ ಸುತ್ತುಪೌಳಿ ಹಾಗೂ ಗರ್ಭಗುಡಿಯ ಪಂಚಾಂಗ ಪತ್ತೆಯಾಗಿದೆ.