Published On: Wed, Jan 29th, 2025

ಗದಗ: ಅಯ್ಯಪ್ಪನ ದರ್ಶನಕ್ಕೆ ಹೋದ ಮಾಲಾಧಾರಿ ನಾಪತ್ತೆ

ಗದಗ: ಅಯ್ಯಪ್ಪನ ದರ್ಶನಕ್ಕೆ ಹೋದ ಮಾಲಾಧಾರಿ ನಾಪತ್ತೆಯಾಗಿದ್ದಾರೆ. ಜನವರಿ 7 ರಂದು ಶಬರಿಮಲೆಯ ಅಯ್ಯಪ್ಪ ದರ್ಶನಕ್ಕೆ ಹೋಗಿದ್ದರು ಎಂದು ಹೇಳಲಾಗಿದೆ. ಗದಗ ಜಿಲ್ಲೆ ನರಗುಂದ ತಾಲೂಕಿನ ಕಣಕಿಕೊಪ್ಪ ಗ್ರಾಮದ ವ್ಯಕ್ತಿ ಎಂದು ಹೇಳಲಾಗಿದೆ. ನಾಪತ್ತೆಯಾದ ಮಾಲಾಧಾರಿಯನ್ನು ಹನುಮರಡ್ಡಿ ಕಲಹಾಳ ಎಂದು ಹೇಳಲಾಗಿದೆ. ಹನುಮರಡ್ಡಿ ಗ್ರಾಮದ ಮಾಲಾಧಿರಿಗಳೊಂದಿಗೆ ಶಬರಿಮಲೆಗೆ ಹೋಗಿದ್ದಾರೆ. ಜನವರಿ 7 ರಂದು ಅಯ್ಯಪ್ಪ ದರ್ಶನ ಪಡೆದು ಮರಳಿ ಬರುವ ವೇಳೆ ನಾಪತ್ತೆಯಾಗಿದ್ದಾರೆ.

ಹನುಮರಡ್ಡಿಮೊಬೈಲ್ ಸ್ವಿಚ್ ಆಪ್ ಆದ ಕಾರಣ ಗೆಳೆಯರಿಗೆ ಸಂಪರ್ಕಕ್ಕೆ ಸಿಕ್ಕಿಲ್ಲ. ಹನುಮರಡ್ಡಿಗಾಗಿ ಕೇರಳ ರಾಜ್ಯದ ಪಂಪಾ, ಶಬರಿಮಲೆಯಲ್ಲಿ ಹುಡುಕಾಟ ನಡೆಸಲಾಗಿದೆ. ಹನುಮರಡ್ಡಿ ಕುಟುಂಬಸ್ಥರು ಕೇರಳದ ಪಂಪಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹನುಮರಡ್ಡಿ ಆಗನಕ್ಕಾಗಿ ಆತನ ತಾಯಿ ಕಾದು ಕುಳಿತಿದ್ದಾರೆ. 21 ದಿನಗಳು ಕಳೆದ್ರು ಮನೆಗೆ ಬಾರದ ಮಗನ ನೆನೆದು ಹೆತ್ತವರ ಕಣ್ಣೀರು ಹಾಕುತ್ತಿದ್ದಾರೆ. ಕೇರಳ ಪೊಲೀಸರು ಆದಷ್ಟು ಬೇಗನೆ ಮಗನ ಹುಡುಕಿಕೊಂಡು ಕುಟುಂಬಸ್ಥರ ಒತ್ತಾಯ ಮಾಡಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter