ತಂತ್ರಜ್ಞಾನವನ್ನು ಅರಿತು ಜ್ಞಾನವನ್ನು ವೃದ್ಧಿಸಿ: ವಕೀಲರಿಗೆ ನ್ಯಾಯಾದೀಶೆ ಭಾಗ್ಯಮ್ಮ ಕರೆ
ಬಂಟ್ವಾಳ: ದ..ಕ.ಜಿಲ್ಲಾ ನ್ಯಾಯಾಲಯ ಮತ್ತು ಕರ್ನಾಟಕ ಜ್ಯುಡಿಸಿಯಲ್ ಅಕಾಡೆಮಿ ಬೆಂಗಳೂರು ಇವರ ಆಶ್ರಯದಲ್ಲಿ ಬಿ.ಸಿ.ರೋಡಿನ ಪ್ರಧಾನ ಸಿವಿಲ್ ನ್ಯಾಯಾಲಯದ ಅವರಣದಲ್ಲಿರುವ ವಕೀಲರ ಸಂಘದ ಸಭಾಭವನದಲ್ಲಿ” ಇ-ಕೋರ್ಟ್ಸ್ ತರಬೇತಿ ಕಾರ್ಯಾಗಾರ” ಮಂಗಳವಾರ ನಡೆಯಿತು.

ಬಂಟ್ವಾಳ ಹಿರಿಯ ಸಿವಿಲ್ ನ್ಯಾಯದೀಶರಾದ ಭಾಗ್ಯಮ್ಮ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ,ಪ್ರಸಕ್ತ ದಿನಮಾನಗಳಲ್ಲಿ ತಂತ್ರಜ್ಞಾನದ ತಿಳುವಳಿಕೆಯ ಅವಶ್ಯಕತೆ ಇರುವ ನಿಟ್ಟಿನಲ್ಲಿ ವಕೀಲರು ಕೂಡ ಇಂತಹ ಕಾರ್ಯಗಾರಗಳಲ್ಲಿ ಪಾಲ್ಗೊಂಡು ಅದರ ಸದುಪಯೋಗ ಪಡೆದು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಹೆಚ್ಚುವರಿ ಸಿವಿಲ್ ನ್ಯಾಯದೀಶ ಕೃಷ್ಣಮೂರ್ತಿ, ವಕೀಲರ ಸಂಘದ ಅಧ್ಯಕ್ಷ ರಿಚಾರ್ಡ್ ಡಿ.ಕೋಸ್ತ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ದ.ಕ.ಜಿಲ್ಲಾ ನ್ಯಾಯಾಲಯದ ಕಂಪ್ಯೂಟರ್ ವಿಭಾಗದ ಮುಖ್ಯ ತಂತ್ರಜ್ಞ ಅಭಿಲಾಶ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಹಿರಿಯ ಶಿರೇಸ್ತೆದಾರರಾದ ಆಶಾ ಕೆ.ಪಿ.ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.
ಶಿರೇಸ್ತೆದಾರರಾದ ಕೆ.ಬಾಲಕೃಷ್ಣ ಸ್ವಾಗತಿಸಿ, ರೇಣುಕಾ ವಂದಿಸಿದರು.ಶಿರೇಸ್ತೆದಾರ ಇಸ್ಮಾಯಿಲ್ ಕಾರ್ಯಕ್ರಮ ನಿರೂಪಿಸಿದರು.