ಬಂಟ್ವಾಳದಲ್ಲಿ ಶ್ರೀ ಕಾಶೀ ಮಠಾಧೀಶರಿಂದ ಗಂಗಾರತಿ
ಬಂಟ್ವಾಳ: ಇಲ್ಲಿನ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ನೇತ್ರಾವತಿ ನದಿ ತೀರದಲ್ಲಿ ಶನಿವಾರ ರಾತ್ರಿ ಸುಮಂಗಳೆಯರಿಂದ ಸಾಮೂಹಿಕ ವಿಷ್ಣು- ಸಹಸ್ರನಾಮ ಪಠಣ, ಕುಂಕುಮಾರ್ಚನೆ ಮತ್ತು ಗಂಗಾರತಿ ನೆರವೇರಿತು.

ಶ್ರೀ ಕಾಶೀಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮಿಜಿಯವರುನೇತ್ರಾವತಿ ನದಿಗೆ ಗಂಗಾರತಿ ನೆರವೇರಿಸಿ ಆಶೀರ್ವಚನ ನೀಡಿದರು.

ಶ್ರೀಗಳು ಪುಂಜಾಲಕಟ್ಟೆಯಿಂದ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ಶ್ರೀ ದೇವಳಕ್ಕೆ ಭೇಟಿ ನೀಡಿ ಸಾಮೂಹಿಕ ವಿಷ್ಣು- ಸಹಸ್ರನಾಮ ಪಠಣ, ಕುಂಕುಮಾರ್ಚನೆ ಮತ್ತು ಗಂಗಾರತಿಯಲ್ಲಿಪಾಲ್ಗೊಂಡರು.ಅದೇರೀತಿ ಬಂಟ್ವಾಳ ಶ್ರೀಕಾಶೀಮಠಕ್ಕು ಚಿತ್ತೈಸಿದರು.ಈ ಸಂದರ್ಭ ದೇವಳದ ಆಡಳಿತಮೊಕ್ತೇಸರರು,ಮೊಕ್ತೇಸರರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.