ಸಿದ್ದಕಟ್ಟೆ ಪ್ರಾ. ಕೃ. ಪ. ಸ.ಸಂಘಕ್ಕೆ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರ ಪ್ರಕೋಷ್ಠದ 12 ಮಂದಿಯು ಭರ್ಜರಿ ಗೆಲುವು
ಬಂಟ್ವಾಳ :ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲೊಂದಾದ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಆಡಳಿತಮಂಡಳಿ ಮುಂದಿನ ಐದು ವರ್ಷಗಳ ಅವಧಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಪ್ರಕೋಷ್ಠದ 12 ಮಂದಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಸಂಘದ ಹಾಲಿ ಅಧ್ಯಕ್ಷ ಪ್ರಭಾಕರ ಪ್ರಭು ನೇತೃತ್ವದಲ್ಲಿ 12 ಸ್ಥಾನವನ್ನು ಸ್ವೀಪ್ ಗಳಿಸುವ ಮೂಲಕ ಮತ್ತೊಮ್ಮೆ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಸಾಮಾನ್ಯಕ್ಷೇತ್ರದಿಂದ ಪ್ರಭಾಕರಪ್ರಭು ಕರ್ಪೆ ,ರಶ್ಮಿತ್ ಶೆಟ್ಟಿ ,ಚಂದ್ರಶೇಖರ ಶೆಟ್ಟಿ,ದಿನೇಶ್ ಪೂಜಾರಿ,ಎ.ಶಿವಗೌಡ,ಹಿ.ವರ್ಗ ‘ಎ’ ಕ್ಷೇತ್ರದಿಂದ ಸತೀಶ್ ಪೂಜಾರಿ,ಹಿ.ವರ್ಗ’ಬಿ’ ಕ್ಷೇತ್ರದಿಂದ ಸಂದೇಶ್ ಶೆಟ್ಟಿ,ಮಹಿಳಾ ಮೀಸಲು ಕ್ಷೇತ್ರದಿಂದ ಪುಪ್ಪಲತಾ ಎಸ್ .ಆರ್.,ಮಂದಾರತಿ ಶೆಟ್ಟಿ,ಪ.ಜಾ.ಕ್ಷೇತ್ರದಿಂದ ವೀರಪ್ಪ ಪರವ,ಪ.ಪಂ.ಕ್ಷೇತ್ರದಿಂದ ಜಾರಪ್ಪ ನಾಯ್ಕ್ ಹಾಗೂ ಸಾಲಗಾರರಲ್ಲದ ಸ್ಥಾನದಿಂದ ವಿಶ್ವನಾಥ ಶೆಟ್ಟಿಗಾರ್ ಜಯಭೇರಿಗಳಿಸಿದ್ದಾರೆ.
ಮಂಗಳೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಸೂಪರಿಡೆಂಟ್ ಎ.ಗೋಪಾಲ್ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು,ನಿಯಮಿತದ ಸಿ.ಒ.ಆರತಿ ಶೆಟ್ಟಿ ಮತ್ತು ಸಿಬ್ಬಂದಿಗಳು ಸಹಕರಿಸಿದರು.
ಗೆಲುವು ಸಾಧಿಸಿದ ನೂತನ ನಿರ್ದೇಶಕರಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್,ಪ್ರ.ಕಾರ್ಯದರ್ಶಿ ಸುದರ್ಶನ್ ಬಜ ಸಹಿತ ಪಕ್ಷದ ಪ್ರಮುಖರು ಅಭಿನಂದನೆ ಸಲ್ಲಿಸಿದ್ದಾರೆ.