ಶ್ರೀರಾಮ ವಿದ್ಯಾಕೇಂದ್ರಕ್ಕೆ ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ| ಎಸ್ ಎಲ್ ಬೈರಪ್ಪ ಭೇಟಿ
ಬಂಟ್ವಾಳ: ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ| ಎಸ್ ಎಲ್ ಬೈರಪ್ಪ ಅವರು ಶನಿವಾರಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದರು. ವಿದ್ಯಾಕೇಂದ್ರದ ಸಂಸ್ಥಾಪಕರು,ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ,ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಮತ್ತಿತರರು ಸ್ವಾಗತಿಸಿದರು. ಶ್ರೀರಾಮ ಶಿಶು ಮಂದಿರಕ್ಕೆ ಭೇಟಿ ನೀಡಿದ ಡಾ.ಎಸ್.ಎಲ್ ಬೈರಪ್ಪ ಅವರನ್ನು ವಿದ್ಯಾರ್ಥಿಗಳು ಆರತಿ ಬೆಳಗಿ ತಿಲಕವನ್ನಿಟ್ಟು ಸ್ವಾಗತಿಸಿದರು.

ವಿದ್ಯಾಕೇಂದ್ರದ ಎಲ್ಲಾ ಚಟುವಟಿಕೆ, ಮಿನಿ ಕ್ರೀಡೋತ್ಸವವನ್ನು ಅವರು ವೀಕ್ಷಿಸಿದರು. ನಂತರ ಭಾರತ ಮಾತೆಗೆ ದೀಪಪ್ರಜ್ವಲನೆ ಮಾಡಿ ಪುಷ್ಪಾರ್ಚನೆಗೈದರು.
ಜೀವನ ಶಿಕ್ಷಣ ದೊರೆಯುತ್ತಿದೆ: ಬೈರಪ್ಪಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಡಾ.ಎಸ್.ಎಲ್ ಬೈರಪ್ಪ ಅವರುಭಾರತದ ಸನಾತನ ಧರ್ಮವನ್ನು ಉಳಿಸಿಕೊಳ್ಳುವಲ್ಲಿ ಈ ವಿದ್ಯಾಸಂಸ್ಥೆಯು ಮಹುತ್ತರವಾದ ಪಾತ್ರವನ್ನು ವಹಿಸಿದೆ. ಪಠ್ಯಪುಸ್ತಕ ಹೊರತಾದ ಜೀವನ ಶಿಕ್ಷಣವನ್ನು ಈ ವಿದ್ಯಾಕೇಂದ್ರದಲ್ಲಿ ನೀಡಲಾಗುತ್ತಿದೆ. ಕಲಿಕೆಗೆ ಬೇಕಾದುದು ಪೂರಕ ವಾತಾವರಣವೇ ಹೊರತು ಪಠ್ಯಕ್ರಮ ಅಲ್ಲ. ಅದು ಇಲ್ಲಿ ಸಾಕಾರಗೊಂಡಿದೆ” ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ, ಸಾಫ್ಟವೇರ್ ಇಂಜಿನಿಯರ್ ಆದ, ಸಾಹಿತಿ ಸಹನಾ ವಿಜಯ್ ಕುಮಾರ್, ಜ್ಯೋತಿಷ್ಯ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದ ಡಾ| ರವಿ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಹಾಗೂ ಡಾ| ಕಮಲಾ ಪ್ರಬಾಕರ್ ಭಟ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸುಶ್ಮಿತಾ ಭಟ್ ಸ್ವಾಗತಿಸಿ, ಅಧ್ಯಾಪಕರಾದ ಜಿನ್ನಪ್ಪ ಕಾರ್ಯಕ್ರಮ ನಿರೂಪಿಸಿದರು.