ಬಂಟ್ವಾಳ: ಕರಿಯಂಗಳ ಗ್ರಾ.ಪಂ ವಠಾರದಲ್ಲಿ ಪಂಚ ಗ್ಯಾರಂಟಿ ಯೋಜನೆ ನೋಂದಾವಣೆ ಶಿಬಿರ

ಬಂಟ್ವಾಳ : ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು ವತಿಯಿಂದ ಕರಿಯಂಗಳ ಗ್ರಾ.ಪಂ ವಠಾರದಲ್ಲಿ ನೋಂದಾವಣೆ ಬಾಕಿ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ನಡೆಯಿತು.ಮಾಜಿ ಸಚಿವರಾದ ಬಿ.ರಮಾನಾಥ ರೈ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ಬಡವರ ಜೀವನ ಮಟ್ಟ ಸುಧಾರಿಸುವ ಉದ್ದೇಶದಿಂದ ಪಂಚ ಗ್ಯಾರಂಟಿ ಜಾರಿ ಮಾಡಿದ್ದು, ಇದರಿಂದಾಗಿ ಬಡವರ ಕಲ್ಯಾಣ ಹಾಗೂ ಸ್ವಾಭಿಮಾನದ ಜೀವನ ಸಾಗಿಸಲು ಪೂರಕವಾಗಿದೆ ಎಂದರು.
ಅಮ್ಟಾಡಿ,ಅಮ್ಮುಂಜೆ,ಕರಿಯಂಗಳ, ಬಡಗಬೆಳ್ಳೂರು, ಕಳ್ಳಿಗೆ, ತುಂಬೆ, ಪುದು, ಮೇರಮಜಲು ಗ್ರಾಮಗಳನ್ನು ಒಳಗೊಂಡು ಈ ಶಿಬಿರ ನಡೆಯಿತು.ಇದಕ್ಕು ಮುನ್ನ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ರವರ ನಿಧನಕ್ಕೆ ಮೌನ ಪ್ರಾರ್ಥನೆ ಮೂಲಕ ಶೃದ್ದಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅದ್ಯಕ್ಷೆ ಜಯಂತಿ ವಿ.ಪೂಜಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಕುಮಾರ್ ,ಮಾಜಿ ತಾ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಕರಿಯಂಗಳ ಗ್ರಾ.ಪಂ ಅದ್ಯಕ್ಷೆ ರಾಧಾ ಲೋಕೇಶ್, ಉಪಾದ್ಯಕ್ಷ ರಾಜು ಕೊಟ್ಯಾನ್,ಸ್ಥಳೀಯ ಮುಖಂಡರಾದ ಚಂದ್ರಹಾಸ್ ಪಲ್ಲಿಪಾಡಿ,ಚಂದ್ರಶೇಖರ್ ಭಂಡಾರಿ,ಇಬ್ರಾಹಿಂ ನವಾಜ್,ವೀಣಾ ಆಚಾರಿ,ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ರಶ್ಮಿ, ವಸಂತಿ, ನಯನ ಉಪಸ್ಥರಿದ್ದರು.