ಮಂಗಳೂರು: ದೈವದ ನೇಮ ಆಗುವ ಗದ್ದೆಯಲ್ಲಿ ತ್ಯಾಜ್ಯ ರಾಶಿ ಕಂಡು ದೈವ ಕೆಂಡಾಮಂಡಲ, ದೈವದ ಪ್ರಶ್ನೆಗೆ ದೈವಸ್ಥಾನದ ಆಡಳಿತ ಮಂಡಳಿ ಕಕ್ಕಾಬಿಕ್ಕಿಯಾಗಿದೆ. ಉಳ್ಳಾಲ ತಾಲೂಕಿನ ಕುಂಪಲ ಬಳಿಯ ಕನೀರುತೋಟ ಎಂಬಲ್ಲಿ ಘಟನೆ ನಡೆದಿದೆ. ವೈದ್ಯನಾಥ ದೈವದ ನೇಮ ಹಾಗೂ ವಲಸರಿ‌ ಸೇವೆಯಿತ್ತು. ದೈವ ಆವೇಶವಾಗಿ ಇನ್ನೇನು ವಲಸರಿ ಹೊರಡಬೇಕು ಎಂಬಷ್ಟರಲ್ಲಿ ದೈವ ಕಸ ರಾಶಿ ಕಂಡು ಕೋಪಗೊಂಡಿದೆ.

ದೈವ ಆಡಳಿತ ಮಂಡಳಿಯ ಸದಸ್ಯರನ್ನು ಇದೇನು ವಲಸರಿ ಗದ್ದೆಯೋ, ಸಂತೆಗದ್ದೆಯೋ ಎಂದು ದೈವದ ಪ್ರಶ್ನೆ ಮಾಡಿದೆ. ನಾನು ಎಂಜಲು ತುಳಿದು ವಲಸರಿ ಹೋಗಬೇಕೆ ಎಂದು ಪ್ರಶ್ನೆ ಮಾಡಿದೆ. ದೀಪದ ದಳಿಯಲ್ಲಿ ಇರುವ ಸಂತೆ ತೆಗೆಯದೆ ವಲಸರಿ ಇಳಿಯೋಲ್ಲ ಎಂದು ವೈದ್ಯನಾಥ ದೈವದ ಕೋಪಾವೇಶದ ನುಡಿದೆ.

ಹೇಗೆ ಆಗಬೇಕೋ ಹಾಗೆಯೇ ಆಗಬೇಕು, ಹೇಗೋ ಆದರೆ ಆಯ್ತು ಎನ್ನುವುದು ಉಚಿತವಲ್ಲ, ನಾನು ಮಾಯದಲ್ಲಿ ಹೇಗೂ ವಲಸರಿ ಹೋಗುತ್ತೇನೆ. ಎಂಜಲು ತುಳಿದು ಹೋದರೆ ಅದರಿಂದ ಕೇಡುಂಟಾದರೆ ನಿಮಗೆ ಅದಕ್ಕಾಗಿ ಎಚ್ಚರಿಸುತ್ತೇನೆ ಎಂದು ಹೇಳಿದೆ.

By suddi9

Leave a Reply

Your email address will not be published. Required fields are marked *