ಅಂಗನವಾಡಿಕೇಂದ್ರಗಳಿಗೆ ಸಾಮಾಗ್ರಿಗಳ ವಿತರಣೆ
ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಇದರ ವತಿಯಿಂದ ತಾಲೂಕಿನ ವಿವಿಧ ಅಂಗನವಾಡಿಕೇಂದ್ರಗಳಿಗೆ ವಿವಿಧ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಸುಜೀರ್ ಹಾಗೂ ಪುದು ಮಾರಿಪಲ್ಲ ಸೇರಿ ಮೂರು ಅಂಗನವಾಡಿ ಕೇಂದ್ರಗಳಿಗೆ ಊಟದ ತಟ್ಟೆ, ಪ್ಲಾಸ್ಟಿಕ್ ಕುರ್ಚಿ,ಡ್ರಾಯಿಂಗ್ ಪುಸ್ತಕ, ಎರಡೆರಡು ಬಕೆಟ್, ಕಸಕಡ್ಡಿ ತುಂಬಿಸುವ ಬಕೆಟ್, ಪ್ರತೀ ಮಕ್ಕಳಿಗೆ ಕುಡಿಯುವ ನೀರಿನ ಬಾಟಲ್, ಉಪಹಾರ ಡಬ್ಬ ವಿತರಿಸಲಾಯಿತು.
ಸುಮಾರು 18 ಸಾವಿರ ರೂ.ವೆಚ್ಚದಲ್ಲಿ ಸಾಮಗ್ರಿಗಳನ್ನು ವಿತರಿಸಲಾಗಿದ್ದು,ರೋಟರಿಯನ್ ಗಳಾದ ಸದಾಶಿವ ಬಾಳಿಗ ಮತ್ತು ಪ್ರಕಾಶ್ ಬಾಳಿಗ ಆರ್ಥಿಕ ನೆರವು ನೀಡಿದರು.
ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷರಾದ ಬೇಬಿ ಕುಂದರ್, ರೋಟರಿ ಟ್ರಸ್ಟ್ ಅಧ್ಯಕ್ಷರಾದ ಐತಪ್ಪ ಆಳ್ವ, ಆನ್ಸ್ ರೋಟರಿ ಅಧ್ಯಕ್ಷೆ ಭಾರತಿ ಬೇಬಿ ಕುಂದರ್ ಉಪಸ್ಥಿತರಿದ್ದರು.