ಬಂಟ್ವಾಳ: ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ  ಭಾನುವಾರ ನಡೆದ ಚುನಾವಣೆಯಲ್ಲಿ ಸಹಕಾರ ಪ್ರಕೋಷ್ಠ ಬೆಂಬಲಿತರಾಗಿ ಸ್ಪರ್ಧಿಸಿದ್ದ 13 ಮಂದಿ ಅಭ್ಯರ್ಥಿಗಳು ಜಯಭೇರಿ ಗಳಿಸಿದ್ದಾರೆ.

ಜಯಶಂಕರ ಬಾಸ್ರಿತ್ತಾಯ ಸೇರಿದಂತೆ ಇವರ ನೇತೃತ್ವದಲ್ಲಿ ಸ್ಪರ್ಧಿಸಿದ್ದ ಪ್ರದೀಪ್ ಶೆಟ್ಟಿ,ಜ್ಞಾನೇಶ್ವರ ಪ್ರಭು,ಲಿಂಗಪ್ಪ ಎಸ್.,
ಅರವಿಂದ್ , ಯಶವಂತ ದೇರಾಜೆ,ನಾರಾಯಣ ಪೂಜಾರಿ,ವಿಜಯ ರೈ,ನಾಗಪ್ಪ ನಾಯ್ಕ,ಗಣೇಶ್ ಕುಮಾರ್ ಅಂತರ , ಮೋಹಿನಿ ಶೆಟ್ಟಿ, ಮಮತಾ, ರತ್ನ ಅವರು ಜಯಭೇರಿ ಸಾಧಿಸಿದ್ದಾರೆ.
ಸಹಕಾರ ಪ್ರಕೋಷ್ಠದಡಿಯಲ್ಲಿ ಅಭೂತಪೂರ್ವವಾಗಿ ಜಯಗಳಿಸಿದ ನೂತನ ನಿರ್ದೇಶಕರನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,ಜಿ.ಪಂ.ಮಾಜಿ ಸದಸ್ಯ ರವೀಂದ್ರಕಂಬಳಿ,ಬಂಟ್ವಾಳ ಬಿಜೆಪಿ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಅವರು ಅಭಿನಂದಿಸಿದ್ದಾರೆ.

By suddi9

Leave a Reply

Your email address will not be published. Required fields are marked *