ಬಂಟ್ವಾಳ: 18ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಶಿಕ್ಷಕಿ ಸುಧಾ ನಾಗೇಶ್ಗೆ ಬಾಲಬಂಧು ಪ್ರಶಸ್ತಿ ಪುರಸ್ಕಾರ
ಬಂಟ್ವಾಳ ತಾಲೂಕಿನ 18ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ನೀಡಲಾಗುವ ಬಾಲಬಂಧು ಪ್ರಶಸ್ತಿ ಪುರಸ್ಕಾರ ಶ್ರೀ ಶಾರದಾ ಪ್ರೌಢ ಶಾಲೆಯ ಸಹ ಶಿಕ್ಷಕಿ ಸುಧಾ ನಾಗೇಶ್ ಅವರಿಗೆ ನೀಡಿ ಗೌರವಸಲಾಗುವುದು. ಶಂಭೂರು ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. 18ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕಿನಲ್ಲಿ ಮಕ್ಕಳ ಸಾಹಿತ್ಯಾದಿ ಕಲೆಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳಿಗೆ ಈ ಪುರಸ್ಕಾರ ನೀಡಲಾಗುವುದು.
ಸುಧಾ ನಾಗೇಶ್ ಅವರು ಕವಯಿತ್ರಿಯಾಗಿರುವ ಇವರು ಮೂಡಲಮನೆ, ಹೃದಯರಾಗ , ಹನಿ ಕವನ ಸಂಕಲನಗಳನ್ನು ಈಗಾಗಲೇ ಪ್ರಕಟಿಸಿದ್ದಾರೆ. ಹೀಗೆ ಸುಮ್ಮನೆ ಎಂಬ ಹಾಸ್ಯ ಲಹರಿ, ಮಿನಿ ಎನ್ ಸೈಕ್ಲೋಪೀಡಿಯ , ಫಾರ್ ಸ್ಟೂಡೆಂಟ್ಸ್ ಎಂಬ ಮಿನಿ ಅರ್ಥ ಕೋಶ, ಜೀನಿಯಸ್ ಎಂಬ ವಿದ್ಯಾರ್ಥಿ ಕೈಪಿಡಿ, ರಂಗ ಕಲಾ ಭೂಷಕೆರ್ ಶ್ರೀ ಸೀತಾರಾಮ ಕುಲಾಲೆರ್ ಎಂಬ ತುಳು ಕೃತಿ ರಚಿಸಿದ್ದಾರೆ.
ಕಳೆದ 15 ವರ್ಷಗಳಿಂದ ಶಾರದಾ ವಾಣಿ ಎಂಬ ಮಕ್ಕಳ ಸ್ವರಚನೆಗಳ ಹಸ್ತ ಪತ್ರಿಕೆ ಬಿಡುಗಡೆಯಲ್ಲಿ ಇವರ ಶ್ರಮ ಹೆಚ್ಚಿನದ್ದು,ಇವರು ಮಕ್ಕಳಿಗೆ ಶಿಬಿರಗಳ ಸಂಘಟನೆ ವಿದ್ಯಾರ್ಥಿ ಸಾಹಿತ್ಯ ಗೋಷ್ಠಿ ಆಯೋಜನೆ ಮಾಡಿಕೊಂಡಿ ಬಂದಿದ್ದಾರೆ. ಈವರೆಗೆ 576 ವಿದ್ಯಾರ್ಥಿಗಳಿಗೆ ಗೈಡ್ಸ್ ಗಳೊಗೆ ತರಬೇತಿ ನೀಡಿದ್ದು, 5 ಗೈಡ್ಸ್ ಗಳು ರಾಷ್ಟ್ರಪತಿ ಪುರಸ್ಕಾರವನ್ನು ,55 ಗೈಡ್ಸ್ ಗಳು ರಾಜ್ಯ ಪುರಸ್ಕಾರ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಅಲ್ಲದೆ 12 ಸ್ಕೌಟ್ಸ್ ಮತ್ತು 15,ಗೈಡ್ಸ್ ಗಳು ‘ವಿಶ್ವ ಸಾಂಸ್ಕೃತಿಕ ಜಾಂಬೂರಿಯಲ್ಲಿ ಭಾಗವಹಿಸಿದ್ದಾರೆ. 4 ಸ್ಕೌಟ್ ಮತ್ತು ಇಬ್ಬರು ಗೈಡ್ಸ್ ವಿಟ್ಲ ಸ್ಥಳೀಯ ಸಂಸ್ಥೆಯು ಹಮ್ಮಿಕೊಂಡಿದ್ದ ಜಿಲ್ಲಾ ಕ್ಯಾಂಪೊರಿಯಲ್ಲಿ ಭಾಗವಹಿಸಿದ್ದಾರೆ. ಇವರು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.