ಪೊಳಲಿ ಸಮುದಾಯದತ್ತ ಕಾರ್ಯಕ್ರಮ ಮತ್ತು ಅಭಿನಂದನಾ ಸಮಾರಂಭ
ಪೊಳಲಿ: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರ ಊರವರ ಪ್ರೋತ್ಸಾಹ ಅತಿ ಅಗತ್ಯ. ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಿದೆ ಎಂದು ಸರಕಾರಿ ಪ್ರೌಢಶಾಲೆ ಪೊಳಲಿ ಇಲ್ಲಿ ನಡೆದ ಸಮುದಾಯದತ್ತ ಕಾರ್ಯಕ್ರಮ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಶಾಸಕರಾದ ಯು. ರಾಜೇಶ್ ನಾಯ್ಕ್ ಅಭಿಪ್ರಾಯ ಪಟ್ಟರು.
ಅವರು 30ರಂದು ಬುಧವಾರ ಎಂ ಆರ್ ಪಿ ಎಲ್ ವತಿಯಿಂದ ಸುಮಾರು 6 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಶೌಚಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಪೊಳಲಿ ರಾಮಕೃಷ್ಣ ತಪೋವನದ ಅಧ್ಯಕ್ಷ ವಿವೇಕ ಚೈತನ್ಯಾನಂದ ಸ್ವಾಮೀಜಿ ದೀಪ ಬೆಳಗಿಸಿ ಶುಭ ಹಾರೈಸಿದರು. ಕ್ರೀಡಾ ಕ್ಷೇತ್ರದಲ್ಲಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಅಭಿನಂದನಾ ವಾಚನವನ್ನು ಶಾಲಾ ದೈಹಿಕ ಶಿಕ್ಷಕರಾದ ಶ್ರೀ ಜಯಂತ ಆಚಾರ್ಯ ನೆರವೇರಿಸಿದರು. ಇತ್ತೀಚೆಗಷ್ಟೇ ಉಪ ಪ್ರಾಂಶುಪಾಲರಾಗಿ ಪದೋನ್ನತಿ ಹೊಂದಿದ ಶ್ರೀಮತಿ ಜಾನೆಟ್ ಲೋಬೊ ಇವರನ್ನು ವಿದ್ಯಾರ್ಥಿಗಳ ಸಮ್ಮುಖ ಪೋಷಕರ ಸಮ್ಮುಖ ಶಾಸಕರ ಸಮ್ಮುಖದಲ್ಲಿ ಅಭಿನಂದಿಸಲಾಯಿತು.
ಇವರ ಅಭಿನಂದನ ವಾಚನವನ್ನು ಪೌಲಿ ಎನ್ ವಿ ವಾಚಿಸಿದರು.
ಪೊಳಲಿ ಸರ್ವ ಮಂಗಳ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರಾದ ವೆಂಕಟೇಶ ನಾವಡ ಅಧ್ಯಕ್ಷತೆ ವಹಿಸಿದ್ದರು. ಕರಿಯಂಗಳ ಗ್ರಾಮ ಪಂಚಾಯತ ಅಧ್ಯಕ್ಷರಾದ ರಾಧಾ ಲೋಕೇಶ್,
ಕೇಶವ ಪೊಳಲಿ, ಎಸ್‌ಡಿಎಂಸಿ ಸದಸ್ಯರಾದ ಯಶವಂತ ಪೊಳಲಿ, ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ಉಪಪ್ರಾಂಶುಪಾಲರಾದ ಜಾನೆಟ್ ಲೋಬೊ, ಸಮಾರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದರು.
ಶಾಲಾ ಮುಖ್ಯಸ್ಥರಾದ ಸುಬ್ರಾಯ ಪೈ ಎನ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಮರ್ಲಿನ್ ಪಾಯಸ ನಿರೂಪಿಸಿದರು. ವಸಂತಿ ಧನ್ಯವಾದ ಸಮರ್ಪಿಸಿದರು.