ಬಂಟ್ವಾಳ: ಯುವವಾಹಿನಿ ಬಂಟ್ವಾಳ ಘಟಕ ಬೈದಶ್ರೀ “ಬಿಲ್ಲವ ಪ್ರೀಮಿಯರ್ ಲೀಗ್ ” ಕ್ರಿಕೆಟ್ ಪಂದ್ಯಾಟ ಉದ್ಘಾಟನಾ ಕಾರ್ಯಕ್ರಮ

ಈ ನಾಡು ಕಂಡ ಶ್ರೇಷ್ಠ ಸಮಾಜಸೇವಕ ಕೀರ್ತಿಶೇಷ ಕೆ.ಸೇಸಪ್ಪ ಕೋಟ್ಯಾನ್ ಸ್ಮರಣಾರ್ಥ ನಡೆಯುವ ಕ್ರೀಡೆಯ ಮೂಲಕ ಅಶಕ್ತರಿಗೆ ಸಹಾಯಹಸ್ತ ನೀಡುವ ಯುವವಾಹಿನಿ ಕಾರ್ಯ ಇತರರಿಗೂ ಸ್ಪೂರ್ತಿ ಹಾಗೂ ಪ್ರೇರಣೆ ನೀಡಿದೆ ಎಂದು ಸಮಾಜಸೇವಕ, ಸೇವ್ ಲೈಪ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅರ್ಜುನ್ ಭಂಡಾರ್ಕರ್ ಹೇಳಿದರು.
ಬಂಟ್ವಾಳ ಎಸ್.ವಿ.ಎಸ್ ಶಾಲಾ ಮೈದಾನದಲ್ಲಿ ಭಾನುವಾರ ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ನಡೆದ “ಬೈದಶ್ರೀ ಬಿಲ್ಲವ ಪ್ರೀಮಿಯರ್ ಲೀಗ್ ” ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಉದ್ಯಮಿ, ಬಿ.ಸಿ.ರೋಡ್ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಕ್ರಿಕೆಟ್ ಪಂದ್ಯಾಟದ ಟ್ರೋಪಿ ಅನಾವರಣಗೊಳಿಸಿದರು. ಅದಲ್ಲದೇ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ , ಲೋಹಿತ್ ಆಕಾಶಭವನ ಕ್ರಿಕೆಟ್ ಪಂದ್ಯಾಟ ಆಡುವ ಮೂಲಕ ಪಂದ್ಯಾಟವನ್ನು ಉದ್ಘಾಟಿಸಿದರು.
ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷರಾದ ರಾಮಚಂದ್ರ ಸುವರ್ಣ, ರಾಜೇಶ್ ಸುವರ್ಣ, ರಾಜೇಶ್ ಮೆಸ್ಕಾಂ, ಅರುಣ್ ಕುಮಾರ್, ಹರೀಶ್ ಕೋಟ್ಯಾನ್ ಕುದನೆ ಉಪಾಧ್ಯಕ್ಷರಾದ ನಾರಾಯಣ ಪೂಜಾರಿ ಪಲ್ಲಿಕಂಡ ಮತ್ತಿತ್ತರು ಉಪಸ್ಥಿತರಿದ್ದರು. ಕ್ರೀಡಾ ನಿರ್ದೇಶಕ ಮಧುಸೂದನ್ ಮದ್ವ ಸ್ವಾಗತಿಸಿ, ಸಂಚಾಲಕ ವಿಕ್ರಮ್ ಶಾಂತಿ ಧನ್ಯವಾದ ಅರ್ಪಿಸಿದರು. ಸಮಾರಂಭದ ಆದ್ಯಕ್ಷತೆ ವಹಿಸಿದ್ದ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಕ್ರಿಕೆಟ್ ಪಂದ್ಯಾಟದಲ್ಲಿ ಚಾಂಪಿಯನ್ ಪಡೆದ ಲಕ್ಷಣ್ ಭುವನೇಶ್ ಪಚ್ಚಿನಡ್ಕ ಮಾಲಕತ್ವದ ಕೋಟಿ ಚೆನ್ನಯ ಕ್ರಿಕೆಟರ್ಸ್ ಅಮ್ಟಾಡಿ ತಂಡವು ಗೆದ್ದ 25 ಸಾ.ರೂ. ನಗದು ಪುರಸ್ಕಾರವನ್ನು ಯುವವಾಹಿನಿಯ ಸೇವಾ ಯೋಜನೆಗೆ ಹಸ್ತಾಂತರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.