ಪೊಳಲಿ : ಆಸರೆ ಸೇವಾ ಫೌಂಡೇಶನ್ ವತಿಯಿಂದ ‘ಆಸರೆಡ್ ಕೆಸರ್ದ ಗೊಬ್ಬು’ ಕ್ರೀಡಾ ಕೂಟ

ಗ್ರಾಮೀಣ ಕ್ರೀಡೆಗೆ ಉತ್ತೇಜನ ನೀಡುವ ಸಲುವಾಗಿ ಆಸರೆ ಸೇವಾ ಫೌಂಡೇಶನ್ (ರಿ) ಆಶ್ರಯದಲ್ಲಿ ಆಸರೆಡ್ ಕೆಸರ್ದ ಗೊಬ್ಬು ಕ್ರೀಡಾ ಕೂಟವು ಅಕ್ಟೋಬರ್ 20 ಭಾನುವಾರ (ನಾಳೆ) ರಂದು ಕಲಯಂಗಳ ಗ್ರಾಮದ ಪುಂಚಮೆ ಎಂಬಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟ್ವಾಳ ಮಾನ್ಯ ಶಾಸಕರಾದ ರಾಜೇಶ್ ನಾಯಕ್ ಉಳಿಪಾಡಿಗುತ್ತು ನೆರವೇರಿಸಲಿದ್ದಾರೆ. ಪೊಳಲಿಯ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯನಂದ ಸ್ವಾಮೀಜಿ ಗೌರವ ಉಪಸ್ಥಿತಿ ವಹಿಸಲಿದ್ದಾರೆ. ಮಾನ್ಯ ಸಚಿವರು ಬಿ. ರಮನಾಥ ರೈ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತರು, ಬೆಳ್ಳೂರು ಪ್ರಗತಿಪರ ಕೃಷಿಕರಾದ ನಿರಂಜನ ಸೇಮಿತರು ಕೆಸರುಗದ್ದೆ ಉದ್ಘಾಟನೆಯನ್ನ ಮಾಡಲಿದ್ದಾರೆ. ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರಾಧಾ, ಚಲನಚಿತ್ರ ನಟಿ ಕುಮಾರಿ, ಸಪ್ತಾ ಪಾವೂರು ಸೇರಿದಂತೆ ಮತ್ತಿತ್ತರು ಆಗಮಿಸಲಿದ್ದಾರೆ.
ಕರಿಯಂಗಳ, ಅಮ್ಮುಂಜೆ ಹಾಗೂ ಬಡಗಬೆಳ್ಳೂರು ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗಾಗಿ ಕೆಸರುಗದ್ದೆ ಓಟ, ಮಡಕೆ ಒಡೆಯುವುದು, ತಿರುವು ಓಟ, ವಾಲಿಬಾಲ್, ಹಗ್ಗ ಜಗ್ಗಾಟ, ನಿಧಿ ಶೋಧ, ತಪ್ಪಂಗಾಯಿ, ಕಂಬಕ್ಕೆ ಹತ್ತುವ ಸ್ಪರ್ಧೆ, ತೆಂಗಿನ ಗರಿ ಹೆಣೆಯುವುದು, ಮುಡಿ ಕಟ್ಟುವುದು ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸುದ್ದಿ 9 ಯೂಟ್ಯೂಬ್ ಚಾನೆಲ್ ನಲ್ಲಿ ಕೆಸರ್ದ ಗೊಬ್ಬು ಕ್ರೀಡಾ ಕೂಟದ ನೇರಪ್ರಸಾರವಿರಲಿದೆ.