ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಬಿ.ತಿಮ್ಮಪ್ಪ ನಾಯ್ಕಗೆ ಅಭಿನಂದನಾ ಕಾರ್ಯಕ್ರಮ
ಬಂಟ್ವಾಳ: ಕೆಲಿಂಜ ದ.ಕ.ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ,ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಬಿ.ತಿಮ್ಮಪ್ಪ ನಾಯ್ಕ ಅವರಿಗೆ ಅಭಿನಂದನಾ ಕಾರ್ಯಕ್ರಮ
ಕೆಲಿಂಜ ಶಾಲೆಯಲ್ಲಿನಡೆಯಿತು.

ಮುಚ್ಚುವ ಹಂತಕ್ಕೆ ತಲುಪಿದ್ದ ಈ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಹಕಾರದಿಂದ 22 ಇದ್ದ ಮಕ್ಕಳ ಸಂಖ್ಯೆಯನ್ನು 95 ಕ್ಕೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ ದಾನಿಗಳ ನೆರವಿನಿಂದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥೆಯನ್ನು ತಿಮ್ಮಪ್ಪ ನಾಯ್ಕ್ ಅವರು ಮಾಡಿದ್ದಾರೆ.
ಹಾಗೆಯೇ 24 ಬಾರಿ ಸ್ವಯಂ ರಕ್ತದಾನಗೈದು ಅದೆಷ್ಟೋ ಮಂದಿಗೆ ಜೀವದಾನ ನೀಡಿರುವ ಅವರು ರಾಜ್ಯ ಮಟ್ಟದ ಕ್ರೀಡಾಪಟು ಕೂಡ ಅಗಿದ್ದಾರೆ, ಸಮಾಜಿಕ ಕಳಕಳಿ ಹೊಂದಿರುವ ಅವರು ಕೃಷಿಕ ಮತ್ತು ಮಕ್ಕಳಿಗೆ ವಿಶೇಷ ಶೈಕ್ಷಣಿಕ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುವ ಮೂಲಕ ಜನಮನ ಗೆದ್ದ ಶಿಕ್ಷಕನನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗಿದ್ದು,
ಅವರ ಸಾಧನೆಗೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಶಾಲಾಭಿವೃದ್ದಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘ ಜಂಟಿಯಾಗಿ ಅವರನ್ನು ಅದ್ದೂರಿಯಾಗಿ ಸನ್ಮಾನಿಸಿತು..
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಪೆಲತಡ್ಕ, ಎಸ್.ಡಿ.ಎಂ.ಸಿ.ಅಧ್ಯಕ್ಷೆ ಜಯಂತಿ, ಪ್ರಮುಖರಾದ ಸಂತೋಷ್ ಶೆಟ್ಟಿ ಶೀನಾಜೆ,ಚಿತ್ತರಂಜನ್ ನೆಕ್ಕಿಲಾರು, ಹಮೀದ್, ದೇವಪ್ಪ ಕೆಲಿಂಜ,ಮೋಹಿತ್ ಶೆಟ್ಟಿ ಕೆಲಿಂಜ, ಹಾಗೂ ಶಾಲಾಭಿವೃದ್ದಿ ಸಮಿತಿ ಪ್ರಮುಖರು,ಹಳೇ ವಿದ್ಯಾರ್ಥಿ ಸಂಘದ ಪ್ರಮುಖರು, ಪೋಷಕರು ಮತ್ತು ಶಿಕ್ಷಕ ವೃಂದ ಹಾಜರಿದ್ದರು.