ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರ ಸಂಘಕ್ಕೆ 28,23,960.47 ನಿವ್ವಳ ಲಾಭ :ಅಧ್ಯಕ್ಷ ರವೀಂದ್ರ ಕಂಬಳಿ
ಬಂಟ್ವಾಳ: ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರ ಸಂಘ ಲಿ 2023-24 ನೇ ಸಾಲಿನಲ್ಲಿ ಒಟ್ಟು 56.19 ಕೋಟಿ ವ್ಯವಹಾರ ನಡೆಸಿ28,23,960.47 ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ ಅವರು ತಿಳಿಸಿದ್ದಾರೆ.
ಮಂಗಳೂರಿನ ಶಾಂತಿನಿಲಯ ಸಭಾಂಗಣದಲ್ಲಿ ನಡೆದ ಸಂಘದವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸದಸ್ಯರಿಗೆ ಶೇ. 9 ಡಿವಿಡೆಂಡ್ ಘೋಷಿಸಿದರು.ಸಂಸ್ಥೆಯು ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದು , ಕಳೆದ ವರ್ಷಾಂತ್ಯಕ್ಕೆ ಕೃಷಿ ಯಂತ್ರೋಪಕಾರಣ ವ್ಯಾಪಾರ ವಹಿವಾಟು ನಿಂದ 6.65 ಕೋಟಿ ಮತ್ತು ಬ್ಯಾಂಕಿಗ್ ವಿಭಾಗ ದಲ್ಲಿ 49.54 ವ್ಯವಹಾರ ಸಾಧನೆ ಮಾಡಿದೆ. 2024-25 ನೇ ಸಾಲಿಗೆ 8 ಕೋಟಿ ಮತ್ತು ಬ್ಯಾಂಕಿಂಗ್ ನಲ್ಲಿ 65 ಕೋ.ರೂ.ಗಳ ವ್ಯವಹಾರರ ಗುರಿ ಇರಿಸಿಕೊಳ್ಳಲಾಗಿದೆ.ಆಡಿಟ್ ವರ್ಗಿಕರಣದಲ್ಲಿ ‘ಎ’ ತರಗತಿಯನ್ನು ಪಡೆದಿರುತ್ತದೆಎಂದರು ,
ಉಪಾಧ್ಯಕ್ಕ್ಷರಾದ ಅಶೋಕ್ ಕುಮಾರ್ ಶೆಟ್ಟಿ,ನಿರ್ದೇಶಕರುಗಳಾದ ಎಸ್ ರಾಜು ಪೂಜಾರಿ,ಮೋನಪ್ಪ ಶೆಟ್ಟಿ ಎಕ್ಕಾರು,ಎನ್ ಎ ರವಿ ಬಸಪ್ಪ,ಸೀತಾರಾಮ್ ರೈ,ಭಾಸ್ಕರ್ ಎಸ್ ಕೋಟ್ಯಾನ್,ಎಸ್ ಬಿ ಜಯರಾಮ್ ರೈ,ಜಯರಾಮ್ ಪಿ.ಸಿ,ಕರುಣಾಕರ ಶೆಟ್ಟಿ ಬಿ, ಕೃಷ್ಣಯ್ಯ ಮೂಲೆತೋಟ,ಎನ್ ರಾಜಶೇಖರ ಜೈನ,ಜಯಶಂಕರ ಬಾಶ್ರೀತ್ತಾಯ,ಜೆ ತಿಮ್ಮ ಪೂಜಾರಿ,ಬಿ ಭಾಸ್ಕರ ಕಾಮತ್,ವೆಂಕಪ್ಪ,ಕೆ ನೀಲಪ್ಪ ನಾಯ್ಕ ಪ್ರಭಾ ಮಾಲಿನಿ,ಶಾರದಾ ಭಾಗವತ್ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಇದರ ಪ್ರತಿನಿಧಿ ಶಶಿ ಕುಮಾರ್ ರೈ ಬಿ, ಸಹಕಾರ ಸಂಘ ಗಳ ಉಪ ನಿಬಂಧಕರು ಹೆಚ್ ಎನ್ ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯದರ್ಶಿ ಪ್ರೇಮ್ ರಾಜ್ ಭಂಡಾರಿ ಯವರು ವರದಿ ವಾಚಿಸಿ,ಲೆಕ್ಕಪತ್ರ ಮಂಡಿಸಿ ಕೊನೆಯಲ್ಲಿ ವಂದಿಸಿದರು.