ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರುಗಳು ಪದಗ್ರಹಣ ಸಮಾರಂಭ
ಬಂಟ್ವಾಳ: ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರುಗಳಾದ ಚಂದ್ರಶೇಖರ ಭಂಡಾರಿ ಮತ್ತು ಬಾಲಕೃಷ್ಣ ಆರ್ ಅಂಚನ್ ಅವರ ಪದಗ್ರಹಣ ಸಮಾರಂಭವು ಪಾಣೆಮಂಗಳೂರಿನ ಸಾಗರ ಅಡಿಟೋರಿಯಂನಲ್ಲಿ ಬುಧವಾರ ನಡೆಯಿತು.ಮಾಜಿ ಸಚಿವ ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ನೂತನ ಅಧ್ಯಕ್ಷರಿಗೆ ವಲಯ ಮಟ್ಟದಿಂದ ಪಕ್ಷವನ್ನು ಬಲಿಷ್ಠಗೊಳಿಸುವ ಹೊಣೆಗಾರಿಕೆ ಇದೆ.ಎರಡು ಬ್ಲಾಕ್ ಗೂ ಸುಂದರವಾದ ಕಚೇರಿಯನ್ನು ಹೊಂದಿರುವುದು ಸಂತಸ ತಂದಿದೆ ಎಂದರು.

ಜಿಲ್ಲೆಯಲ್ಲಿ ಪಕ್ಷದ ವಿಸಿಟಿಂಗ್ ಕಾಡ್೯ , ಲೆಟರ್ ಹೆಡ್ ಇಲ್ಲದಂತ ಒಳ್ಳೆಯ ಕಾರ್ಯಕರ್ತರಿದ್ದಾರೆ. ಕಳೆದ ಚುನಾವಣೆಯಲ್ಲಿ ಪಕ್ಷ ಸೋತರೂ,ಸತ್ತಿಲ್ಲ ಕಾರ್ಯಕರ್ತರು ಯಾವುದೇ ಉದಾಸೀನ ಮಾಡದೆ ಪ್ರಾಮಾಣಿಕವಾಗಿ ದುಡಿದಿದ್ದಾರೆ ಎಂದ ಅವರು ಕಾಂಗ್ರೆಸ್ ಯಾವತ್ತು ಕೂಡ ದ್ವೇಷದ ರಾಜಕಾರಣ ಮಾಡುವುದಿಲ್ಲ,ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಕ್ಕಾಗಿಯೇ ಪುರಸಭೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೆವೆ. ಇಪೋಕ್ರೆಸಿ ರಾಜಕಾರಣ ಕಾಂಗ್ರೆಸ್ ಎಂದೂ ಒಪ್ಪುದಿಲ್ಲ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ವಿಧಾನಪರಿಷತ್ ಸದಸ್ಯ,ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಮಾತನಾಡಿ, ಕಾರ್ಯಕರ್ತರೊಂದಿಗೆ ನೇರ ಸಂಪರ್ಕದಲ್ಲಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಅತ್ಯಂತ ಪ್ರಮುಖವಾಗಿದೆ.ಪಕ್ಷದ ಮುಂಚೂಣಿ ಸಹಿತ ವಿವಿಧ ಎಲ್ಲಾ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಿಸಿಕೊಂಡು ಹೊಂದಾಣಿಕೆಯಿಂದ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಪಕ್ಷ ಬೂತ್ ಮಟ್ಟದಿಂದ ಬಲಿಷ್ಠಗೊಳ್ಳಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸುವ ಮೂಲಕ ಮುಂದಿನ ಜಿ.ಪಂ.,ತಾ.ಪಂ.ಚುನಾವಣೆಗೆ ಸಜ್ಜಾಗಬೇಕು ಎಂದರು.

ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸಭಾಧ್ಯಕ್ಷತೆ ವಹಿಸಿದ್ದರು.ಕೆಪಿಸಿಸಿ ಪ್ರಧಾನಕಾರ್ಯದರ್ಶಿಗಳಾದ ಪದ್ಮರಾಜ್ ಆರ್ ಪೂಜಾರಿ, ಜಿ.ಎ.ಭಾವ ಮಾತನಾಡಿ ಶುಭಹಾರೈಸಿದರು.ಬಂಟ್ವಾಳ ಪುರಸಭಾಧ್ಯಕ್ಷ ವಾಸುಪೂಜಾರಿ ಲೊರೆಟ್ಟೋ,ಗೇರು ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್.ಖಾದರ್,ಜಿ.ಪಂ.ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ,ಪದ್ಮಶೇಖರ್ ಜೈನ್, ಎಂ.ಎಸ್.ಮಹಮ್ಮದ್ ,ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್,,ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ,ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ವಿಲ್ಮಾ ಮೋರಸ್, ಪಕ್ಷದ ಪ್ರಮುಖರಾದ ಅಬ್ಬಾಸ್ ಆಲಿ,ಪದ್ಮನಾಭ ರೈ,ಮೋಹನ್ ಗೌಡಕಲ್ಮಂಜ,ಸುಭಾಶ್ಚಂದ್ರ ಶೆಟ್ಟಿ,ಸುಹಾನ್ ಆಳ್ವ,ಚಿತ್ತರಂಜನ್ ಶೆಟ್ಟಿ ಬೊಂಡಾಲ,ಸುರೇಶ್ ಜೋರ,ಇಬ್ರಾಹಂ ನವಾಜ್,ಸುದರ್ಶನ್ ಜೈನ್ ಮೊದಲಾದವರಿದ್ದರು.
ಇದೇವೇಳೆಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರುಗಳಾದ ಚಂದ್ರಶೇಖರ ಭಂಡಾರಿ ಮತ್ತು ಬಾಲಕೃಷ್ಣ ಆರ್ ಅಂಚನ್ ಅವರಿಗೆ ನಿಕಟಪೂರ್ವ ಅಧ್ಯಕ್ಷರುಗಳಾದ ಸುದೀಪ್ ಕುಮಾರ್ ಮತ್ತು ಬೇಬಿಕುಂದರ್ ಅವರು ಅಧಿಕಾರ ಹಸ್ತಾಂತರಿಸಿದರು.
ಅದೇರೀತಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್
ಕಿಸಾನ್ ಘಟಕ,ಕಾರ್ಮಿಕ ಘಟಕ ಹಾಗೂ ಎನ್ ಎಸ್ ಯು ಐ ಘಟಕದ ಅಧ್ಯಕ್ಷರುಗಳಾದ ಕ್ರಮವಾಗಿ ಸುಧಾಕರ ಶೆಣೈ ಖಂಡಿಗ, ಚಂದ್ರಶೇಖರ ಆಚಾರ್ಯ ,ಮಹಮ್ಮದ್ ಸಪ್ವಾನ್ ಸರವು ನೇತೃತ್ವದ ಸಮಿತಿಗಳು ಅಧಿಕಾರ ಸ್ವೀಕರಿಸಿದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ನ ನಿಕಟಪೂರ್ವಾಧ್ಯಕ್ಷ ಸುದೀಪ್ ಕುಮಾರ್ ರೈ ಸ್ವಾಗತಿಸಿದರು.ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ನ ನಿಕಟಪೂರ್ವಾಧ್ಯಕ್ಷ ಬೇಬಿಕುಂದರ್ ವಂದಿಸಿದರು.
ಮಾಣಿ ಗ್ರಾ.ಪಂ.ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕೋಡಾಜೆ ಕಾರ್ಯಕ್ರಮ ನಿರೂಪಿಸಿದರು.