ಜಪಾನ್ ಕರಾಟೆ ತರಬೇತುದಾರರಿಗೆ ಸನ್ಮಾನ
ಬಂಟ್ವಾಳ: ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಮತ್ತು ಯಮೊಟೊ ಶೊಟೆಕಾನ್ ಕರಾಟೆ ಅಸೋಸಿಯೇಷನ್ ವತಿಯಿಂದ ಜಪಾನ್ ಕರಾಟೆ ತರಬೇತುದಾರರನ್ನು ಸನ್ಮಾನಿಸಲಾಯಿತು.

ತರಬೇತುದಾರರಾದ ಶಿಹಾನ್ ನಿಯರ ಮಸಕಿ, ಶಿಹಾನ್ ಇಟೋ ಒರಿಮೊ, ಶಿಹಾನ್ ಕಿತಾಮುರ್ ಕೋಕಿ ಇವರನ್ನು ಸನ್ಮಾನಿಸಲಾಯಿತು. ಕ್ಲಬ್ಬಿನ ಅಧ್ಯಕ್ಷ ಸುರೇಶ ಶೆಟ್ಟಿ, ಕಾರ್ಯದರ್ಶಿ ರಾಜೇಶ ಶೆಟ್ಟಿ ಸೀತಾಳ, ಅಸೋಸಿಯೇಷನ್ ಅಧ್ಯಕ್ಷ ಶಾಜು ಮುಲಾವನ್, ಗೌರವಾಧ್ಯಕ್ಷ ರಾಘವೇಂದ್ರ ಭಟ್, ಕಾರ್ಯದರ್ಶಿ ವಿಜಯ ಫೆರ್ನಾಂಡಿಸ್ ಮತ್ತಿತರರಿದ್ದರು.
ಭಾನುವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಜಪಾನ್ ಕರಾಟೆ ತರಬೇತುದಾರರಿಂದ ಜಿಲ್ಲೆಯ ವಿವಿಧ ಶಾಲೆಯ ಕರಾಟೆಪಟುಗಳಿಗೆ ತರಬೇತಿ ಕಾರ್ಯಕ್ರಮ ನಡೆಯಿತು.ನೂರಕ್ಕು ಅಧಿಕ ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.