ಉಡುಪಿ: ವಿದ್ಯಾರ್ಥಿನಿಯ ಮೇಲೆ ಬೀದಿ ನಾಯಿಗಳ ದಾಳಿ, ಸ್ವಲ್ಪದರಲ್ಲೇ ಪಾರಾದ ಬಾಲಕಿ, ವಿಡಿಯೋ ಇಲ್ಲಿದೆ ನೋಡಿ

ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಪೋಷಕರು ತುಂಬಾ ಎಚ್ಚರಿಕೆಯಿಂದ ಇರಬೇಕು ಎನ್ನುವುದು ಇದಕ್ಕೆ. ಉಡುಪಿಯಲ್ಲಿ ಒಂದು ಭಯಾನಕ ಘಟನೆಯೊಂದು ನಡೆದಿದೆ. ಶಾಲಾ ವಿದ್ಯಾರ್ಥಿನಿಯ ಮೇಲೆ ಬೀದಿ ನಾಯಿಯೊಂದು ಅಟ್ಯಾಕ್ ಮಾಡಿದೆ. ಉಡುಪಿಯ ಹೂಡೆದಲ್ಲಿ ಈ ಘಟನೆ ನಡೆದಿದೆ.
ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದೆ. ವಿದ್ಯಾರ್ಥಿನಿ ತನ್ನ ಕೈಯಲ್ಲಿದ್ದ ಕೊಡೆ ಹಿಡಿದು ಓಡಿಸಿದರು, ನಾಯಿಗಳು ಆಕೆಯ ಮೇಲೆ ದಾಳಿ ಮಾಡಲು ವಿದ್ಯಾರ್ಥಿನಿಯತ್ತ ನುಗ್ಗಿದೆ.
ಈ ವೇಳೆ ವಿದ್ಯಾರ್ಥಿನಿ ನಾಲ್ಕೈದು ನಾಯಿಗಳು ಜತೆಯಾಗಿ ಅಟ್ಯಾಕ್ ಮಾಡಲು ಬಂದಾಗ ಹುಡುಗಿ ಕೂಗಿದ್ದಾಳೆ. ವಿದ್ಯಾರ್ಥಿನಿ ನಾಯಿಗಳು ತನ್ನ ಬಳಿ ಮತ್ತೆ ಬಂದಾಗ ಕೈಯಲ್ಲಿದ್ದ ಕೊಡೆಯನ್ನು ಬೀಸಿದ್ದಾಳೆ.
ವಿಡಿಯೋ ಇಲ್ಲಿದೆ ನೋಡಿ
ಈ ವೇಳೆ ನಾಯಿಗಳು ಭಯಗೊಂಡು ಹಿಂದಕ್ಕೆ ಸರಿದಿದೆ. ಈ ಬಗ್ಗೆ ಸಿಸಿಟಿವಿಯಲ್ಲಿ ವಿಡಿಯೋ ಸೆರೆಯಾಗಿದೆ. ಇನ್ನು ಈ ಬಗ್ಗೆ ಸ್ಥಳೀಯರು ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಇದಕ್ಕೆ ತಕ್ಷಣ ಪರಿಹಾರ ಕಲ್ಪಸುವಂತೆ ಇತ್ತಾಯಿಸಿದ್ದಾರೆ.