Published On: Thu, Aug 1st, 2024

ರಾಜ್ಯ ಸರ್ಕಾರ ಸಮಾರೋಪದಿಯಲ್ಲಿ ಪರಿಹಾರ ವಿತರಿಸಬೇಕು : ಆರ್.ಆಶೋಕ್ ಆಗ್ರಹ

ಬಂಟ್ವಾಳ: ಮಳೆ ರಾಜ್ಯದಲ್ಲಿ ದೊಡ್ಡ ರೀತಿಯ ಹಾನಿ ಮಾಡಿದೆ. ಸಾವಿನ ಜೊತೆಗೆ ಹಲವು ರೀತಿಯಲ್ಲಿ ರಾಜ್ಯದಲ್ಲಿ ಹಾನಿಯಾಗಿದೆ.ದ.ಕ.ಜಿಲ್ಲೆಯಲ್ಲು ಅಪಾರಪ್ರಮಾಣದಲ್ಲಿ ಹಾನಿಯಾಗಿದ್ದು,ರಾಜ್ಯ ಸರ್ಕಾರ ಸಮಾರೋಪದಿಯಲ್ಲಿ ಪರಿಹಾರ ವಿತರಿಸಬೇಕು ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಆಶೋಕ್ ಆಗ್ರಹಿಸಿದ್ದಾರೆ.


ಬುಧವಾರ ಬಂಟ್ವಾಳದ ಬಡ್ಡಕಟ್ಟೆ, ಜಕ್ರಿಬೆಟ್ಟು ಕಿಂಡಿ ಅಣೆಕಟ್ಟು, ನಾವೂರು ಮನೆಗಳ ಮುಳುಗಡೆ, ಮಳೆ ಹಾನಿ ಪ್ರದೇಶ ವೀಕ್ಷಣೆ ಮಾಡಿದ ಬಳಿಕ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನಾನು ಹಿಂದೆ ಕಂದಾಯ ಸಚಿವನಾ ಗಿದ್ದಾಗ ರಾಜ್ಯ ಹಾಗೂ ಕೇಂದ್ರದಿಂದ ಸಮಾನ ಅನುದಾನ ಕೊಡುತ್ತಿದ್ದೆವು, ಹಿಂದೆ ನಮ್ಮ ಕಾಂಗ್ರೆಸ್ ಮಿತ್ರರು ಗಂಜಿಕೇಂದ್ರ ತೆರೀತಾ ಇದ್ದರು, ನಾನು ಅದನ್ನು ಬದಲಿಸಿ ಕಾಳಜಿ ಕೇಂದ್ರ ಮಾಡಿ ಗುಣಮಟ್ಟದ ವಿವಿಧ ಬಗೆಯ ಮನೆ ಊಟ ಕೊಟ್ಟಿದ್ದೆ ಆದರೆ ಈಗ ಅಂಥದ್ದು ಎಲ್ಲೂ ನಮಗೆ ಕಾಣಿಸ್ತಾ ಇಲ್ಲ ಎಂದು ಹೇಳಿದರು.
ದ.ಕ.ಜಿಲ್ಲೆಯ ಉಸ್ತುವಾರಿ ಮಂತ್ರಿಗಳು ಬಾರದೇ 15 ದಿನ ಮೇಲಾಗಿದೆ ಅವರ ಹೈಕಮಾಂಡ್ ಜಿಲ್ಲಾ ಮಂತ್ರಿಗಳಿಗೆ ಸ್ಥಳದಲ್ಲಿರಲು ಸೂಚಿಸಿದ್ದರಂತೆ ಆದರೆ ಎಲ್ಲೂ ಜಿಲ್ಲಾ ಮಂತ್ರಿಗಳು ಜನರ ಜೊತೆಗೆ ಕಾಣುತ್ತಿಲ್ಲ,ಪ್ರವಾಹದ ವಿಚಾರದಲ್ಲಿ ರಾಜ್ಯ ಸರ್ಕಾರದ ಪಾತ್ರ ಏನು? ಈ ಸರ್ಕಾರ ಬದುಕಿದೆ ಅಂತ ಜನರಿಗೆ ಗೊತ್ತೇ ಆಗ್ತಿಲ್ಲ, ಇದನ್ನು ಜನ ಗಮನಿಸುತ್ತಾ ಇದ್ದಾರೆ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಪರಿಹಾರ ವಿತರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಇಲ್ಲಿನ ಕಾಂಗ್ರೆಸ್ ಮುಖಂಡರಾದ ರಮಾನಾಥ ರೈ ಅವರು ಆವತ್ತು ಪರಿಹಾರದ ವಿಚಾರದಲ್ಲಿ ಜಗಳ ಮಾಡಿದ್ದರು, ಸರ್ಕಾರ ಐದು ಲಕ್ಷ ಕೊಡೋದು ಕಂಜೂಸ್ ತನ ಅಂದಿದ್ದರು. ಆದರೆ ಈಗ ಪ್ರಧಾನಿ ಮೋದಿಯವರ ಸರಕಾರ 1.25 ಲಕ್ಷ ಕೊಡ್ತಾ ಇದೆ ಆದರೆ ರಾಜ್ಯ ಸರ್ಕಾರ ಏನ್ ಕೊಡ್ತಾ ಇದೆ,  ಈಗ ಕಾಂಗ್ರೆಸ್ ಸರಕಾರ ಪರಿಹಾರ ವಿಚಾರದಲ್ಲಿ ಕಂಜೂಸ್ ತನ ಮಾಡ್ತಾ ಇರುವುದು ನಿಮಗೆ ನಾಚಿಕೆ ಇಲ್ವಾ?ಎಂದು ರೈ ಅವರ ಅಂದಿನ ಪತ್ರಿಕಾಗೋಷ್ಠಿಯ ವೀಡಿಯೋ ಮಾಧ್ಯಮದ ಮುಂದಿರಿಸಿ ತಿರುಗೇಟು ನೀಡಿದರು.
ಮುಖ್ಯಮಂತ್ರಿಯವರು ದೆಹಲಿ ಪ್ರವಾಸ ಬಿಟ್ಟು ರಾಜ್ಯಕ್ಕೆ ಬರಲಿ ನಿಮ್ಮ ಅಕ್ರಮಗಳಿಗೆ ಸ್ಪಷ್ಡನೆ ಕೊಡಲು ನೀವು ದೆಹಲಿಗೆ ಹೋಗಿದ್ದೀರಿ, ಅದೆಲ್ಲಾ ಮತ್ತೆ ಕೊಡಿ, ಮೊದಲು ರಾಜ್ಯದ ಜನರ ಸಮಸ್ಯೆ ಆಲಿಸಿ, ರಾಜ್ಯಾದ್ಯಂತ ಅಪಾರ ಹಾನಿ ಆಗಿದೆ,ಮನೆ, ಬೆಳೆಗಳು ನಾಶವಾಗಿದೆ.ಕೆಲವೆಡೆ ಜೀವಹಾನಿಯಾಗಿದೆ. ರಾಜ್ಯ ಸರ್ಕಾರ ಸಮಾರೋಪದಿಯಲ್ಲಿ ಕೆಲಸ ಮಾಡಬೇಕಿದೆ ಮೊದಲು ಅದನ್ನು ಮಾಡಿ ಮತ್ತೆ ದೆಹಲಿಗೆ ತೆರಳಿ ಎಂದು ಕಿಡಿಕಾರಿದರು.
ಟಾಸ್ಕ್ ಪೋಸ್೯ ರಚಿಸಿ:
ಶಾಸಕರ ನೇತೃತ್ವದ ಟಾಸ್ಕ್ ಪೋರ್ಸ್ ರಚಿಸಿ
ರಸ್ತೆ ಸಹಿತ ವಿವಿಧ ಸಮಸ್ಯೆ ಬಗೆಹರಿಸಲು ಅದಕ್ಕೆ ಐದು ಕೋಟಿ ಅನುದಾನ ಬಿಡುಗಡೆಗೊಳಿಸಿ, ನಾನು ಮತ್ತು ಪಕ್ಷದ  ನಾಯಕರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡ್ತಾ ಇದ್ದೇವೆ, ಎಲ್ಲಿ ಏನು ತಪ್ಪಾಗಿದೆಯೋ ಅದನ್ನ ಸರ್ಕಾರದ ಗಮನಕ್ಕೆ ತರ್ತಾ ಇದ್ದೇವೆ, ಇದೆಲ್ಲ ಮುಗಿದ ಮೇಲೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಯುತ್ತೆನೆ ಎಂದ ಆರ್.ಆಶೋಕ್  ನಾನು ಕಂದಾಯ ಸಚಿವನಾಗಿದ್ದ ಅವಧಿಯಲ್ಲಿ ಅರು ಸಾವಿರ ಕೋಟಿಗೂ ಹೆಚ್ಚು ಹಣ ಪ್ರವಾಹ ಪರಿಹಾರಕ್ಕೆ ಖರ್ಚು ಮಾಡಲಾಗಿದೆ. ಈ ಸರ್ಕಾರ ಹತ್ತು ರೂಪಾಯಿಯನ್ನೂ ಖಜಾನೆಯಿಂದ ಬಿಚ್ಚಿಲ್ಲ ಎಂದು ಹೇಳಿದರು.

ಕಾಂಗ್ರೆಸ್  ಬಾಯಿ ಮುಚ್ಚೋ ರೀತಿಯಲ್ಲಿ ಹೋರಾಟ:
ಮೂಡಾ, ವಾಲ್ಮೀಕಿ ಹಗರಣವನ್ನು ಖಂಡಿಸಿ ಬಿಜೆಪಿ ಇದೇ ಆಗಸ್ಟ್ ೩ ರಂದು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ನಿರ್ಧರಿಸಿದ್ದು ಈ ನಡುವೆ ಇದೀಗ ಪಾದಯಾತ್ರೆಗೆ ಜೆಡಿಎಸ್ ಬೆಂಬಲವಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದು ಇದೀಗ ಕುಮಾರಸ್ವಾಮಿ ಅವರ ಹೇಳಿಕೆಯ ಕುರಿತು ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಇದೆ ವೇಳೆ ಮೂಡಾ, ವಾಲ್ಮೀಕಿ ಹಗರಣದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಜೊತೆಗೂಡಿ ಬೆಂಗಳೂರಿನಿಂದ ಮೈಸೂರಿಗೆ ನಡೆಸಲುದ್ದೇಶಿಸಿರುವ  ಪಾದಯಾತ್ರೆಗೆ ಜೆಡಿಎಸ್ ಇದೀಗ ಬೆಂಬಲ ನೀಡುವುದಿಲ್ಲ ಎಂದು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಆರ್. ಅಶೋಕ್ ನಾನು ಇದನ್ನ ಮಾಧ್ಯಮದಲ್ಲಿ ನೋಡಿದ್ದೇನೆ, ಕುಮಾರಸ್ವಾಮಿ ಕರೆ ಮಾಡಿದ್ರು,ಇಂದು ಸಂಜೆ ಅವರೊಂದಿಗೆ ಮಾತನಾಡುತ್ತೆನೆ. ಈ ಬಿಸಿಯಲ್ಲೇ ಹೋರಾಟ ಆಗಬೇಕು ಅನ್ನೋದು ನಮ್ಮ ಉದ್ದೇಶವಾಗಿದೆ. ಸಾವಿರಾರು ಕೋಟಿಯ ಭ್ರಷ್ಟಾಚಾರ ಆಗಿದೆ, ಸಂವಿಧಾನ ಕಾಪಾಡೋ ಸ್ಥಾನದಲ್ಲಿ ಸಿಎಂ ಇದಾರೆ, ನಾವು ಅನ್ಯಾಯ ಮಾಡಲ್ಲ ಅಂತೆಲ್ಲಾ ಪ್ರಮಾಣ ವಚನ ಸ್ವೀಕರಿಸುತ್ತಾರೆ, ಆದರೆ ಇಷ್ಟು ದೊಡ್ಡ ಹಗರಣ ಮಾಡಿ ಜನರ ಹಣ ಲೂಟಿ ಮಾಡಿದ್ದಾರೆ ಸದನದ ಒಳಗೂ ಎಲ್ಲರ ಜೊತೆಗೂ ಮಾತನಾಡಿ ಹೋರಾಟ ಆಗಿದೆ, ಕಾಂಗ್ರೆಸ್ ನವರು ಬಾಯಿ ಮುಚ್ಚೋ ರೀತಿಯಲ್ಲಿ ಹೋರಾಟ ನಡೆಸಲಾಗಿದೆ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಜಿ.ಟಿ.ದೇವೇಗೌಡರು ಕೂಡ ಪಾದಯಾತ್ರೆಗೆ ವಿರೋಧ ಮಾಡಿದ್ದಾರೆ ಕೃಷಿ, ಮಳೆ ವಿಚಾರ ಇಟ್ಟುಕೊಂಡು ಪಾದಯಾತ್ರೆ ಮುಂದೂಡಿ ಅಂದಿದ್ದಾರೆ, ನಾವು ಕೂಡ ಕೇಂದ್ರದ ನಾಯಕರ ಜೊತೆ ಈ ಬಗ್ಗೆ ಮಾತನಾಡ್ತೀವಿ, ಜೆಡಿಎಸ್ ಕೂಡ ಎನ್ ಡಿಎ ಭಾಗ, ಹೀಗಾಗಿ ಅವರು ಹೋರಾಟದಲ್ಲಿ ಒಟ್ಟಿಗೆ ಇರಬೇಕು, ನಾನು ಕುಮಾರಸ್ವಾಮಿ ಜೊತೆ ಮಾತನಾಡಿ ಸಂಜೆಯೊಳಗೆ‌ ನಿರ್ಧಾರಕ್ಕೆ ಬರ್ತೇವೆ, ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಆದರೆ ಯಾವಾಗ ಪಾದಯಾತ್ರೆ ಆಗುತ್ತೆ ಅನ್ನೋದಷ್ಟೇ ವಿಚಾರ ಎಂದು ಹೇಳಿದರು
ಕಾಂಗ್ರೆಸ್ ನಾಯಕ ಬಿ.ಕೆ.ಹರಿ ಪ್ರಸಾದ್ ಕೂಡ ಸಿದ್ದರಾಮಯ್ಯ ಲೂಟಿ ಮಾಡಿದ್ದಾರೆ ಅಂತಿದ್ದಾರೆ ಅವರೇ ಸಿದ್ದರಾಮಯ್ಯ ವಿರುದ್ದ ಆರೋಪ ಮಾಡ್ತಾ ಇದ್ದಾರೆ, ಮೊದಲು ಇವರ ಸರ್ಕಾರ ಉಳಿಯುತ್ತೋ ನೋಡುವ, ಇವರು ತಪ್ಪು ಮಾಡದೇ ದೆಹಲಿಗೆ ಹೋಗಿದಾರಾ? ಭಿನ್ನಮತ ಇರೋದಕ್ಕೆ ದೆಹಲಿಗೆ ಹೋಗಿದ್ದಾರೆ ಎಂದು ಆಶೋಕ್ ಹೇಳಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು,ಎಂಎಲ್ ಸಿ‌ಪ್ರತಾಪಸಿಂಹ ನಾಯಕ್,ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ,ಬಂಟ್ವಾಳ ಮಂಡಲ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್,ಪ್ರಮುಖರಾದ ಹರಿಕೃಷ್ಣ ಬಂಟ್ವಾಳ,ಪೂಜಾ ಪೈ,ಸುಲೋಚನ ಜಿ.ಕೆ.ಭಟ್, ದೇವಪ್ಪ ಪೂಜಾರಿ, ಆರ್.ಸಿ.ನಾರಾಯಣ ಪುತ್ತೂರು, ರಾಮ್ ದಾಸ ಬಂಟ್ವಾಳ, ದೇವದಾಸ ಶೆಟ್ಟಿ ಬಂಟ್ವಾಳ, ಗೋವಿಂದಪ್ರಭು,ಅಕ್ಷಿತ್ ಸುವರ್ಣ ಮೊದಲಾದವರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter