ಮುಗ್ದಾಲ್ ಗುಡ್ಡೆಯಲ್ಲಿ ‘ಆಟಿಡೊಂಜಿದಿನ ಕಾರ್ಯಕ್ರಮ’
ಬಂಟ್ವಾಳ:“ನಮ್ಮ ವಠಾರ ಮುಗ್ದಾಲ್ ಗುಡ್ಡೆ” ವತಿಯಿಂದ 4 ನೇ ವರ್ಷದ”ಆಟಿಡೊಂಜಿ ದಿನ” ಕಾರ್ಯಕ್ರಮವು ಜರಗಿತು.ಸ್ಥಳೀಯ ಹಿರಿಯರಾದ ರತ್ನಮ್ಮ ದೀಪ ಬೆಳಗಿಸಿ ಉದ್ಘಾಟಿಸಿದರು, ಯಶೋಧ , ರಾಜೀವಿ, ಪ್ರಮೇಯ, ಲಲಿತಾ, ರೇಖಾ ಉಪಸ್ಥಿತರಿದ್ದರು.
ಕು. ನಿತ್ಯ ,ಸಾನ್ವಿ ,ತೃಶಾ ಮತ್ತು ದಿಶಾ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳಿಯ ಪ್ರತಿಭಾನ್ವಿತ ಮಕ್ಕಳು, ಮಹಿಳೆಯರಿಂದ ವಿವಿಧ ತುಳುನಾಡಿನ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮವು ಜರಗಿತು.
ಹಿರಿಯರಾದ ರತ್ನಮ್ಮ ಅವರನ್ನು ಸನ್ಮಾನಿಸಲಾಯಿತು.ವಠಾರದ ವಿವಿಧ ಮನೆಗಳಲ್ಲಿ ತಯಾರಿಸಿ ತಂದಿದ್ದ ತುಳುನಾಡಿನ ಆಟಿ ತಿಂಗಳ ತಿಂಡಿ ತಿನಿಸು ಗಳನ್ನು ವಿತರಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ
ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಅಧ್ಯಕ್ಷರಾದ ಸುರೇಶ್ ಕುಲಾಲ್,
ಮಾಹಿನ್ ಡೆಕೋರೇಟರ್ ನ ಹರೀಶ್,ಡಿ ಜೆ ಒಪರೇಟರ್ ಭಾಸ್ಕರ್ ಮುಂಡಾಡಿ, ನಿತ್ಯಾನಂದ ನಗರದ ಶ್ರೀ ಸದ್ಗುರು ಸೌಂಡ್ಸ್ ನ ಯಜ್ಞೇಶ್, ಅಕ್ಷಯ ಫ್ರೆಂಡ್ಸ್ ನ ಮಹಾಬಲ ಅವರನ್ನು ಗೌರವಿಸಲಾಯಿತು.
ಯಶೋಧ, ಚಂದ್ರಹಾಸ, ದೇವಾನಂದ, ಅಶೋಕ್, ಉಪಸ್ಥಿತರಿದ್ದರು
ವಿಜೇತ ಎನ್. ಕೆ. ಕುಲಾಲ್ ಮತ್ತು ಎನ್.ಕೆ.ಕುಲಾಲ್ ಬೇಕೂರು ಕಾರ್ಯಕ್ರಮ ನಿರೂಪಿಸಿದರು. ಕು. ಹರ್ಷಿತಾ ಕುಲಾಲ್, ಸುಪ್ರೀತಾ ಕಾರ್ಯಕ್ರಮವನ್ನು ನಿರ್ವಹಿಸಿದರು